ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಇಲ್ಲಿಯ ಜೆ.ಸಿ. ನಗರದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಜಯಂತ್ಯುತ್ಸವವನ್ನು ಗುರುವಾರ ಏರ್ಪಡಿಸಲಾಗಿತ್ತು.
ಮಹಾನಗರ ಜಿಲ್ಲಾಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ದೇಶದ ಅಭಿವೃದ್ಧಿಗೆ ಅಗತ್ಯ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶದ ಚಿತ್ರಣವನ್ನು ಬದಲಿಸಿದರು. ಬಾಂಗ್ಲಾ ದೇಶ ಸ್ಥಾಪನೆಯಲ್ಲಿಯೂ ಪಮುಖ ಪಾತ್ರ ವಹಿಸಿದ್ದರು. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಕೈಗೊಂಡ ನಿರ್ಣಾಯಕ ಅಂಶಗಳು, ಇಂದಿಗೂ ಅಖಂಡ ಭಾರತಕ್ಕೆ ಕಾವಲಾಗಿದೆ ಎಂದು ಬಣ್ಣಿಸಿದರು.
ಗ್ರಾಮೀಣ ಜಿಲ್ಲಾಧ್ಯಕ್ಷ ಚಂದ್ರಶೇಖರ ಜುಟ್ಟಲ ಮಾತನಾಡಿ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಬಡತನ ನಿರ್ಮೂಲನೆಗೆ ಅದ್ಭುತ ಯೋಜನೆಗಳನ್ನು ತಂದರು. ದೇಶದ ಬ್ಯಾಂಕ್ಗಳನ್ನು ರಾಷ್ಟ್ರೀಕರಣಗೊಳಿಸಿದರು. ಪ್ರತಿ ನಾಗರಿಕರಿಗೂ ಬ್ಯಾಂಕಿಂಗ್ ಸವಲತ್ತು ಸಿಗುವಂತೆ ಮಾಡಿದರು. ಉಳುವವನೇ ಭೂ ಒಡೆಯ ಜಾರಿಗೆ ತರುವ ಮೂಲಕ ರೈತರಿಗೆ ಬೆನ್ನೆಲುಬಾದರು ಎಂದು ಗುಣಗಾನ ಮಾಡಿದರು.
ಪ್ರಮುಖರಾದ ಎಸ್.ಡಿ. ಮಕಾಂದಾರ, ಪ್ರಕಾಶ ಕುರಹಟ್ಟಿ, ಸುವರ್ಣ ಕಲಕುಂಟ್ಲಾ, ಪ್ರಕಾಶ ಬುರಬುರೆ, ಅಬ್ದುಲ್ ಮುಲ್ಲಾ, ಶಂಕರ ಬೋಜಗಾರ, ಸುನೀಲ ಮರಾಠೆ, ಸಂಗೀತಾ ಪೂಜಾರ, ದೇವಿಕಾ ಹುಬ್ಬಳ್ಳಿ, ರಜಿಯಾ ಬೇಗಂ, ದಾನೇಶ್ವರಿ ನಾಯಕ್, ವಾದಿರಾಜ ಕುಲಕರ್ಣಿ, ಎಚ್.ಎಂ. ರಾಜು, ತನ್ವೀರ ಕೊಪ್ಪದ, ನೆಹರು ಪಾಟೀಲ, ರಾಜು ಲದ್ವಾ, ಇತರರಿದ್ದರು.