ಹುಬ್ಬಳ್ಳಿಯ ಬೆಂಗೇರಿ ಸಂತೆ ಬೈಲಿನ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಜಯಂತಿ ನಿಮಿತ್ತ ರಜತ್ ಉಳ್ಳಾಗಡ್ಡಿಮಠ ಅವರು ಗುರುವಾರ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. 
ಧಾರವಾಡ

ದೇಶಕ್ಕೆ ಇಂದಿರಾ ಕೊಡುಗೆ ಅಪಾರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಉಣಕಲ್ ಹಾಗೂ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಇಲ್ಲಿಯ ಬೆಂಗೇರಿ ಸಂತೆ ಬೈಲಿನ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಜಯಂತಿಯನ್ನು ಗುರುವಾರ ಆಚರಿಸಲಾಯಿತು.

ಹುಬ್ಬಳ್ಳಿ-ಧಾರವಾಡ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ದೇಶದ ಐಕ್ಯತೆ, ಸಮಗ್ರತೆ ಮತ್ತು ಬಡವರ ಏಳಿಗೆಗಾಗಿ ಇಂದಿರಾ ಗಾಂಧಿ ಅವರು ನೀಡಿದ ಕೊಡುಗೆ ಅಪಾರ. ‘ಗರೀಬಿ ಹಠಾವೋ’ ಘೋಷಣೆ ಮೂಲಕ ಬಡವರ ಪರ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದ ದಿಟ್ಟ ನಾಯಕಿ. ಇಂದಿನ ಇಂದಿರಾ ಕ್ಯಾಂಟೀನ್ ಯೋಜನೆಯು ಬಡವರ ಹಸಿವು ನೀಗಿಸುವ ಮೂಲಕ ಅವರ ಆಶಯಗಳನ್ನು ಸಾಕಾರಗೊಳಿಸುತ್ತಿದೆ. ಅವರ ದೂರದೃಷ್ಟಿ ಮತ್ತು ದೃಢ ನಿರ್ಧಾರಗಳು ನಮಗೆಲ್ಲರಿಗೂ ಸದಾ ಸ್ಫೂರ್ತಿ ಎಂದರು.

ಪ್ರಮುಖರಾದ ಹೂವಪ್ಪ ದಾಯಗೋಡಿ, ಸುವರ್ಣ ಕಲ್ಲಕುಂಟ್ಲ, ಸಾದಿಕ್ ಯಕ್ಕುಂಡಿ, ವೀರೇಶ ಕಡಕೋಳಮಠ, ಅಶೋಕ ಕಲಾದಗಿ, ಸಂಗಮೇಶ್ವರ ಗೌರಕ್ಕನವರ, ಬಾಳಮ್ಮ ಜಂಗನವರ, ಸ್ನೇಹ ಜಾಧವ, ಕಲಾವತಿ ದತವಾಡ, ಗೀತಾ ಪಾಟೀಲ, ಶಶಿಕಲಾ ಹಳಿಯಾಳ, ಪಿರಾಜಿ ಖಂಡೇಕರ, ಸುನೀಲ ಮಠಪತಿ, ಬಸವರಾಜ ಮ್ಯಾಗೇಡಿ ಇತರರಿದ್ದರು.