ಹುಬ್ಬಳ್ಳಿ: ರೈತ ಮುಖಂಡರಾದ ಚೂನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಹಿಂಡಲಗಾ ಜೈಲ್ ಭರೋ ಚಳವಳಿ ನಡೆಯುತ್ತಿದ್ದು, ಹುಬ್ಬಳ್ಳಿ ಹಾಗೂ ಸುತ್ತಲಿನ ಗ್ರಾಮಗಳ ರೈತರು ಬಸವೇಶ್ವರ ರೈತ ಸೇವಾ ಸಂಘದ ವತಿಯಿಂದ ಭಾಗವಹಿಸಲು ಸೋಮವಾರ ಪ್ರಯಾಣ ಬೆಳೆಸಿದರು.
ನಗರದ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ರೈತರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಬ್ಬಿಗೆ ನ್ಯಾಯುತ ಬೆಲೆ ಕೊಡುವವರೆಗೆ ಹೋರಾಟ ಮುಂದುವರಿಯಲಿದೆ. ಬೆಳಗಾವಿಯಲ್ಲಿ ಹಿಂಡಲಗಾ ಜೈಲ್ ಭರೋ ಚಳವಳಿ ನಡೆಯಲಿದ್ದು, ಈ ಭಾಗದ ರೈತರು ತೆರಳಲಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಾದ ಶಿವಾನಂದಪ್ಪ ಹೊಸೂರ, ಚನ್ನಪ್ಪಣ್ಣ ವರ್ಕಾರ, ಗುರುವಣ್ಣ ರಾಯನಾಳ, ಶಿವಾನಂದ ಅರಳಿಕಟ್ಟಿ, ಮಹೇಶ ಕುರಿಯವರ, ವೀರಯ್ಯಸ್ವಾಮಿ ಸಾಲಿಮಠ, ವೀರಯ್ಯ ಬಿಜಗತ್ತಿಮಠ, ಬಸವರಾಜ ಹೊಸೂರ, ಜಂಗಳಪ್ಪ ಬಾಳೆಕಾಯಿ, ಬಸು ಹೊಸೂರ, ಅಪ್ಪಣ್ಣ ಕೋಳೂರು, ಜಗದೀಶ ಗಿರಿಯಮ್ಮನವರ, ಜಗದೀಶ ರಾಯನಾಳ, ಶಿವಯ್ಯ ಶಂಕೀನಮಠ, ಮುತ್ತು ಕೊಕನೂರ, ಸಿದ್ದರಾಮ ರಾಯನಾಳ, ಪ್ರಕಾಶ ಕುಲಕರ್ಣಿ, ಮಂಜುನಾಥ ಇಂಟ್ರವಿ ನೂರಾರು ರೈತರು ಬೆಳಗಾವಿಗೆ ವಾಹನಗಳ ಮೂಲಕ ತೆರಳಿದರು.