ಧಾರವಾಡ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್​.ವಿ. ವಿಜಯ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಲೋಕ ಅದಾಲತ್​ ಜರುಗಿತು.  
ಧಾರವಾಡ

ಜಿಲ್ಲಾ ನ್ಯಾಯಾಲಯಗಳಲ್ಲಿ ಲೋಕ ಅದಾಲತ್​

ಧಾರವಾಡ: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್​ ನಡೆಯಿತು. ಬಾಕಿ ಇದ್ದ 54,937 ಪ್ರಕರಣಗಳ ಪೈಕಿ 3,908 ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಂಡು 2,160 ಪ್ರಕರಣ ಹಾಗೂ 31,090 ಪೂರ್ವ ವ್ಯಾಜ್ಯ ಪ್ರಕರಣಗಳ ಪೈಕಿ 27,531 ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಸಲಾಯಿತು.

ಧಾರವಾಡ ಕೌಟುಂಬಿಕ ನ್ಯಾಯಾಲಯದಲ್ಲಿ ವೈವಾಹಿಕ- ಜೀವನಾಂಶ ಪ್ರಕರಣಗಳ ಪೈಕಿ 9 ಪ್ರಕರಣಗಳಲ್ಲಿ ದಂಪತಿಯನ್ನು ಒಂದುಗೂಡಿಸಲಾಯಿತು. ಹುಬ್ಬಳ್ಳಿಯ ಕೌಟುಂಬಿಕ ನ್ಯಾಯಾಲಯದಲ್ಲಿ 12 ಪ್ರಕರಣಗಳಲ್ಲಿ ದಂಪತಿ ಹಾಗೂ ಕುಂದಗೋಳ ನ್ಯಾಯಾಲಯದಲ್ಲಿ 2 ಪ್ರಕರಣಗಳಲ್ಲಿ ದಂಪತಿ ಒಂದಾದರು. ಈ ಕುಟುಂಬಗಳಿಗೆ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯ ಎನ್​.ವಿ. ವಿಜಯ ಶುಭ ಹಾರೈಸಿದರು. ಇದೇವೇಳೆ 207 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ರಾಜಿ ಸಂಧಾನದ ಮೂಲಕ ವಿವಾದಗಳನ್ನು ಇತ್ಯರ್ಥಪಡಿಸಿಕೊಂಡರು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ. ಬಡಿಗೇರ ತಿಳಿಸಿದ್ದಾರೆ.