crime ಖಾಸಗಿ ಬಸ್ ಪಲ್ಟಿಯಾಗಿ ಬಾಲಕಿ ಸಾವು
ಧಾರವಾಡ

ಖಾಸಗಿ ಬಸ್ ಪಲ್ಟಿಯಾಗಿ ಬಾಲಕಿ ಸಾವು

ಹುಬ್ಬಳ್ಳಿ: ತಾಲೂಕಿನ ಛಬ್ಬಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜಸ್ಥಾನದಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದ ಖಾಸಗಿ ಬಸ್ ಗುರುವಾರ ಬೆಳಗಿನ ಜಾವ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಓರ್ವ ಬಾಲಕಿ ಮೃತಪಟ್ಟು, 18 ಜನರಿಗೆ ಗಾಯಗಳಾಗಿವೆ.

ರಾಜಸ್ಥಾನದ ದಿವ್ಯಾಕುಮಾರಿ ಸಾಸರ ಜಾಲೂರ(8) ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಗಾಯಗೊಂಡವರನ್ನು ಕೆಎಂಸಿಆರ್‌ಐನಲ್ಲಿ ದಾಖಲಿಸಲಾಗಿದೆ.

ಹೆದ್ದಾರಿಯಲ್ಲಿ ಮಂಜು ಕವಿದ ವಾತವಾರಣವಿರುವುದರಿಂದ ರಾಜಸ್ಥಾನದಿಂದ ಬೆಂಗಳೂರು ಕಡೆ ಹೊರಟ್ಟಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಸಣ್ಣ ಸೇತುವೆಯಿಂದ ಕೆಳಗಡೆ ಪಲ್ಟಿಯಾಗಿದೆ. ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.