ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. 
ಧಾರವಾಡ

ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರನ್ನು ವಜಾಗೊಳಿಸಲು ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.

ಹಳೆಯ ತೀವ್ರ ಪರಿಷ್ಕರಣೆ ಪದ್ಧತಿ ಮುಂದುವರಿಸಬೇಕು. ಎಸ್‌ಐಆರ್‌ಗೆ ಖರ್ಚು ಮಾಡಿದ 10 ಸಾವಿರ ಕೋಟಿ ರೂ. ಸಿಇಸಿ ಜ್ಞಾನೇಶ ಅವರಿಂದ ವಸೂಲಿ ಮಾಡಬೇಕು. ಎಸ್‌ಐಆರ್ ಮೂಲಕ ಲಕ್ಷಾಂತರ ಮತದಾರರನ್ನು ಹೊರಗಿಟ್ಟು ನಡೆಸಿದ ವಿಧಾನಸಭಾ ಚುನಾವಣೆಗಳನ್ನು ಅಸಿಂಧು ಎಂದು ಘೋಷಿಸಿ ಮರು ಚುನಾವಣೆ ನಡೆಸಬೇಕು. ಎಸ್‌ಐಆರ್ ವಿರೋಧಿ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಬೇಷರತ್ ಹಿಂಪಡೆಯಬೇಕು. ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ ದೆಹಲಿ ಪೊಲೀಸರು ಮತ್ತು ಆದೇಶ ನೀಡಿದ ಅಧಿಕಾರಿಗಳ ಮೇಲೆ ಕ್ರಮವಾಗಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿದ ಮನವಿಯನ್ನು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ರವಾನಿಸಲಾಯಿತು.

ಹು-ಧಾ ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಪ್ರಮುಖರಾದ ಬಸವರಾಜ ಸೂಳಿಭಾವಿ, ಗುರುನಾಥ ಉಳ್ಳಿಕಾಶಿ, ಪ್ರೇಮನಾಥ ಚಿಕ್ಕತುಂಬಳ, ಮಹೇಶ ಪತ್ತಾರ, ನಾಗರಾಜ ಗುರಿಕಾರ, ಅನ್ವರ ಮುಧೋಳ, ಸತೀಶ ಮೆಹರವಾಡೆ, ಆರೀಫ್ ಭದ್ರಾಪುರ ಇತರರಿದ್ದರು.