ಜಿಲ್ಲಾಧಿಕಾರಿ ಸ್ನೇಹಲ್ ಆರ್. 
ಧಾರವಾಡ

ಯುವ ಶಕ್ತಿಯ ಸದ್ಬಳಕೆಗೆ "ಯುವ ಜೋಡೋ'

ಧಾರವಾಡ: ಜಿಲ್ಲೆಯಲ್ಲಿ 16ರಿಂದ 35 ವರ್ಷದ ಯುವಕರನ್ನು ಸಂಟಿಸಿ, ದಾರಿ ತಪ್ಪದೆ ಉತ್ತಮ ಜೀವನ ರೂಪಿಸಿಕೊಳ್ಳುವ ಹಾಗೂ ಸಮಾಜ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ 249 "ಭಾರತ್​ ಜೋಡೋ ಯುವ ಸಂ'ಗಳನ್ನು ರಚಿಸಬೇಕಾಗಿದೆ ಎಂದು ಜಿಲ್ಲಾ-ಕಾರಿ ಸ್ನೇಹಲ್​ ಆರ್​. ಹೇಳಿದರು.
"ಭಾರತ್​ ಜೋಡೋ ಯುವ ಸಂ' ರಚನೆ ಕುರಿತಂತೆ ಜಿಪಂ ಸಭಾಂಗಣದಲ್ಲಿ ಗುರುವಾರ ಅ-ಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಸಂದಲ್ಲಿ ಕನಿಷ್ಠ 100 ಯುವಕರು ಇರಲಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಹಾಗೂ ಹು&ಧಾ ಸೇರಿ ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಗಳನ್ನು ರಚಿಸಲಾಗುತ್ತಿದೆ. ಪ್ರತಿ ಸಂಕ್ಕೆ ಒಬ್ಬ ಮೆಂಟರ್​ ಹಾಗೂ ಜಿಲ್ಲಾ ಮಟ್ಟದಲ್ಲಿ 10 ಮಾಸ್ಟರ್​ ಟೆನರ್​ಗಳನ್ನು ಗುರುತಿಸಲಾಗಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಸುಮಾರು 7,400 ಹಾಗೂ ನಗರ ಪ್ರದೇಶದಲ್ಲಿ ಸುಮಾರು 5,000 ಯುವಕರು ನೋಂದಣಿಯಾಗಿದ್ದು, ಒಟ್ಟು 25,000 ಯುವಕರ ನೋಂದಣಿ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಯುವ ಸಂಗಳ ಮೂಲಕ ಕ್ರೀಡೆ, ಯೋಗಾಭ್ಯಾಸ ಸೇರಿ ವಿವಿಧ ಚಟುವಟಿಕೆಗಳನ್ನು ನಡೆಸಬಹುದು. ಗ್ರಾಮದಲ್ಲಿನ ಸ್ವಚ್ಛತೆ ಸೇರಿ ಸ್ಥಳಿಯ ಸಮಸ್ಯೆಗಳ ಪರಿಹಾರಕ್ಕೆ ಯುವಕರು ಒಗ್ಗೂಡಿ ಕಾರ್ಯ ನಿರ್ವಹಿಸಬೇಕು. ಯುವ ಸಂಗಳ ಸದಸ್ಯರಿಗೆ ಮೆಂಟರ್​ಗಳು ಸರಿಯಾದ ಮಾರ್ಗದರ್ಶನ ನೀಡಿ, ಯುವಕರನ್ನು ಉತ್ತಮ ಚಟುವಟಿಕೆಗಳತ್ತ ಕೊಂಡೊಯ್ಯಬೇಕು. ಮಾರ್ಗಸೂಚಿಗಳು ಕಾಲ&ಕಾಲಕ್ಕೆ ಬಿಡುಗಡೆಯಾಗಲಿವೆ ಎಂದರು.
ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 13 ಸಾವಿರಕ್ಕೂ ಅಧಿ-ಕ ಯುವಕರು ನೋಂದಣಿಯಾಗಿದ್ದು, 249 ಸಂಗಳು ರಚನೆಯಾಗಿವೆ. ಪ್ರತಿ ಸಂಕ್ಕೆ ಸರ್ಕಾರದಿಂದ 10 ಲ ರೂ. ಅನುದಾನ ನೀಡಲಾಗುತ್ತಿದ್ದು, 2 ಲ ರೂ. ಬಂಡವಾಳ ಹಾಗೂ 8 ಲ ರೂ. ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪ್ರೋಬೇಶನರಿ ಐಎಎಸ್​ ಅಧಿ-ಕಾರಿ ಅನುಪ್ರಿಯಾ ಸಾಕ್ಯಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್​ ದೇಸಾಯಿ, ಮಹಾನಗರ ಪಾಲಿಕೆ (ಆಡಳಿತ) ಉಪ ಆಯುಕ್ತೆ ಅನುರಾಧಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಎಚ್​. ಅಮರಾಪೂರ, ಜಿಲ್ಲೆಯ 220ಕ್ಕೂ ಹೆಚ್ಚು ಮೆಂಟರ್​, ಮಾರ್ಗದರ್ಶಕರು ಹಾಗೂ ಜಿಲ್ಲೆಯ 12 ಮಾಸ್ಟರ್​ ಟ್ರೇನರ್​ಗಳು ಭಾಗವಹಿಸಿದ್ದರು.