ಹುಬ್ಬಳ್ಳಿಯ ವಾರ್ಡ್ ನಂ. 48ರಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ನಡೆಸಿದ ಶಾಸಕ ಮಹೇಶ ಟೆಂಗಿನಕಾಯಿ ತಾವು ಸಂಗ್ರಹಿಸಿದ ಕಸವನ್ನು ಇತರರೊಂದಿಗೆ ವಿಲೇವಾರಿ ಮಾಡಿದರು(youths).
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಯುವ (youths) ಮೋರ್ಚಾ ವತಿಯಿಂದ ಸ್ವಚ್ಛತಾ ಅಭಿಯಾನದ ಅಂಗವಾಗಿ ಇಲ್ಲಿಯ ವಾರ್ಡ್ ನಂ. 48ರಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ಏರ್ಪಾಟಾಗಿತ್ತು.
ನೇತೃತ್ವ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಗಳನ್ನು ಯುವ ಮೋರ್ಚಾ ಹಮ್ಮಿಕೊಂಡಿರುವುದು ಶ್ಲಾಘನೀಯ. ಯುವ ಮನಸ್ಸುಗಳು ಒಂದಾದರೆ ಏನೆಲ್ಲ ಅಭಿವೃದ್ಧಿ ಮಾಡಲು ಸಾಥ್ ಸಿಗುತ್ತದೆ ಎಂಬುದಕ್ಕೆ ಇವರು ಉದಾಹರಣೆಯಾಗಿದ್ದಾರೆ ಎಂದು ಬಣ್ಣಿಸಿದರು.
ಶಿರೂರು ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ವಾರ್ಡ್ ಅಧ್ಯಕ್ಷ ರವಿರಾಜ ಕೊಡ್ಲಿ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಪ್ರಮುಖರಾದ ಲಿಂಗರಾಜ ಪಾಟೀಲ, ರಾಮನಗೌಡ ಶೆಟ್ಟನಗೌಡರ, ಪ್ರವೀಣ ಪವಾರ್ ಇತರರು ಭಾಗವಹಿಸಿದ್ದರು.