ಹುಬ್ಬಳ್ಳಿಯ ಹೋಟೆಲ್ ಡೆನಿಸನ್ಸ್‌ನಲ್ಲಿ ಇತ್ತೀಚೆಗೆ ಯಂಗ್ (young) ಇಂಡಿಯನ್ಸ್ (ವೈಐ) ಹುಬ್ಬಳ್ಳಿ ಚಾಪ್ಟರ್ ವಾರ್ಷಿಕೋತ್ಸವದಲ್ಲಿ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಲಾಯಿತು 
ಧಾರವಾಡ

(young) ರಾಷ್ಟ್ರಾಭಿವೃದ್ಧಿಯಲ್ಲಿ ಯುವಕರ ಪಾತ್ರ ಪ್ರಮುಖ

ಹುಬ್ಬಳ್ಳಿ: ಯಂಗ್ (young) ಇಂಡಿಯನ್ಸ್ (ವೈಐ) ಹುಬ್ಬಳ್ಳಿ ಚಾಪ್ಟರ್‌ನ ವಾರ್ಷಿಕೋತ್ಸವವನ್ನು ಇಲ್ಲಿಯ ಹೋಟೆಲ್ ಡೆನಿಸನ್ಸ್‌ನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ದೊಡ್ಡದಿದೆ. ಯಂಗ್ ಇಂಡಿಯನ್ಸ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಹುಬ್ಬಳ್ಳಿ ನಗರದ ಸ್ವಚ್ಛತೆ, ಸುಂದರ ಪರಿಸರ ನಿರ್ಮಾಣ ಮಾಡುವತ್ತ ಗಮನಹರಿಸಬೇಕು. ಕೆರೆಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಸಲಹೆ ನೀಡಿದರು.
ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಹು-ಧಾ ಜಿಲ್ಲಾಧ್ಯಕ್ಷ ವಿಕ್ರಾಂತ ಸೈಗಲ್, ನಿರ್ಗಮಿತ ಅಧ್ಯಕ್ಷ ರಾಹುಲ್ ಸುರಾನ ಮಾತನಾಡಿ, ಹುಬ್ಬಳ್ಳಿಯಲ್ಲಿ 50ಕ್ಕೂ ಹೆಚ್ಚು ಚಟುವಟಿಕೆಗಳನ್ನು ಆಯೋಜಿಸುವುದು, ಸದಸ್ಯತ್ವ ದಿಗುಣಗೊಳಿಸುವುದು, 10 ಸಾವಿರಕ್ಕೂ ಹೆಚ್ಚು ಕಾಲೇಜ್ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದು ಸೇರಿದಂತೆ ಪ್ರಮುಖ ವಿಷಯಗಳನ್ನು ವಿವರಿಸಿದರು.
ಇದೇ ವೇಳೆ ವಾರ್ಷಿಕ ವರದಿ ಬಿಡುಗಡೆ ಮಾಡಲಾಯಿತು.
ಯಂಗ್ ಇಂಡಿಯನ್ಸ್‌ನ ವಕಾಲತ್ತು ಮತ್ತು ನೀತಿಯ ರಾಷ್ಟ್ರೀಯ ಅಧ್ಯಕ್ಷ ಡಾ. ಶ್ರೀನಿವಾಸ ಜೋಶಿ, ಮುಂಬರುವ ವರ್ಷದ ನಾಯಕತ್ವ ತಂಡವನ್ನು ಪ್ರಕಟಿಸಿದರು. ಅಲ್ಲದೇ ರಾಷ್ಟ್ರೀಯ ತಂಡದ ವರದಿಯನ್ನು ಸದಸ್ಯರಿಗೆ ಮಂಡಿಸಿದರು.
ಕೆಎಂಸಿಆರ್‌ಐ ಮನೋವೈದ್ಯ ಡಾ. ಸಮೀರ ಬೆಲ್ವಿ ಮಂಗಳವೇಢೆ, 2026ರ ಹುಬ್ಬಳ್ಳಿ ಚಾಪ್ಟರ್ ಅಧ್ಯಕ್ಷರಾಗಿ, ಎಂ.ಎಂ. ಜೋಶಿ ನೇತ್ರ ಸಂಸ್ಥೆಯ ಮಕ್ಕಳ ನೇತ್ರಶಾಸ್ತ್ರಜ್ಞೆ ಡಾ. ದೀಪ್ತಿ ಜೋಶಿ ಸಹ-ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟಿಸಲಾಯಿತು.