ಹುಬ್ಬಳ್ಳಿಯ (yoga) ವಿಶ್ವ ಹಿಂದು ಪರಿಷತ್ ಕಾರ್ಯಾಲಯ ಕಟ್ಟಡದ ಧರ್ಮಸಿರಿಯಲ್ಲಿ ನಾಲ್ಕು ದಿನಗಳ ಉಚಿತ ವಸತಿ ಸಹಿತ ಜಿಲ್ಲಾ ಪ್ರಶಿಕ್ಷಣ ಶಿಬಿರದ ಸಮಾರೋಪದಲ್ಲಿ ಶ್ರೀ ಯಶವಂತಾನಂದ ಸ್ವಾಮೀಜಿ ಮಾತನಾಡಿದರು.
ಹುಬ್ಬಳ್ಳಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಯೋಗಸ್ಪರ್ಶ ಪ್ರತಿಷ್ಠಾನ (yoga) ವತಿಯಿಂದ ನಗರದ ವಿಶ್ವ ಹಿಂದು ಪರಿಷತ್ ಕಾರ್ಯಾಲಯ ಕಟ್ಟಡದ ಧರ್ಮಸಿರಿಯಲ್ಲಿ ನಾಲ್ಕು ದಿನಗಳ ಉಚಿತ ವಸತಿ ಸಹಿತ ಜಿಲ್ಲಾ ಪ್ರಶಿಕ್ಷಣ ಶಿಬಿರದ ಸಮಾರೋಪ ಸಮಾರಂಭವನ್ನು ಬುಧವಾರ ಏರ್ಪಡಿಸಲಾಗಿತ್ತು.
ಶ್ರೀ ಯಶವಂತಾನಂದ ಸ್ವಾಮೀಜಿ ಮಾತನಾಡಿ, ಈ ಶಿಬಿರವು ಮಕ್ಕಳ ಜೀವನದ ದಿಕ್ಕನ್ನೇ ಬದಲಿಸಲಿದೆ. ಪಾಶ್ಚಿಮಾತ್ಯ ಜೀವನ ಶೈಲಿಯಿಂದ ನಮ್ಮ ಸಂಸ್ಕೃತಿ ಅವನತಿಯತ್ತ ಸಾಗುತ್ತಿದೆ. ಸನಾತನ ಭಾರತೀಯ ಸಂಸ್ಕೃತಿಯನ್ನು ಜೀವಂತವಿಡುವ ಕೆಲಸವನ್ನು ಎಸ್‌ಪಿವೈಎಸ್‌ಎಸ್ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಸಮಿತಿಯ ಪ್ರಾಂತ ಸಂಚಾಲಕಿ ಜಯಶ್ರೀ ಪಾವಟೆ ಸಮಾರೋಪದ ನುಡಿಗಳನ್ನಾಡಿದರು.
ಯೋಗ ಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ ಅಧ್ಯಕ್ಷತೆ ವಹಿಸಿದ್ದರು.
ನುರಿತ ಶಿಕ್ಷಕರು ಮತ್ತು ವಿವಿಧ ಸಾಧಕರಿಂದ ಮಕ್ಕಳಿಗೆ ಯೋಗ ಶಿಕ್ಷಣದ ಜತೆಗೆ ವ್ಯಕ್ತಿತ್ವ ವಿಕಸನದ ಶಿಕ್ಷಣ, ಚಾರಣ, ಮಾತೃಭೋಜನ, ವಿವಿಧ ಆಟಗಳು, ಕರಕುಶಲತೆ, ಹಾಡುಗಳು, ಭಾರತೀಯ ಸಂಸ್ಕೃತಿ ಆಚರಣೆ, ದೇಶಭಕ್ತಿ ಜಾಗೃತಿ, ನಿತ್ಯಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಲು ಅಭ್ಯಾಸ ಮಾಡಿಸಲಾಯಿತು.
ಜಿಲ್ಲಾ ಸಂಚಾಲಕರಾದ ಗೋಪಾಲಕೃಷ್ಣ ಜೋಶಿ, ಅಮರಾವತಿ ಗಾಣಗಿ ಉಪಸ್ಥಿತರಿದ್ದರು
ಶಿಬಿರದ ಮುಖ್ಯ ಶಿಕ್ಷಕಿ ರಶ್ಮಿ ಬೆಳ್ಳೂರ, ಸಹಶಿಕ್ಷಕರು ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.