ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ yoga day ಸಹಯೋಗದಲ್ಲಿ ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಯೋಗ ಜಾಗೃತಿ ನಡಿಗೆಗೆ ಟೈ ಹು-ಧಾ ಮಾಜಿ ಅಧ್ಯಕ್ಷ ಶಶಿಧರ ಶೆಟ್ಟರ್ ಚಾಲನೆ ನೀಡಿದರು.
ಹುಬ್ಬಳ್ಳಿ: ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹುಬ್ಬಳ್ಳಿ ಶಾಖೆ, ಯೋಗ ಸ್ಪರ್ಶ ಪ್ರತಿಷ್ಠಾನ ವತಿಯಿಂದ ನಗರದಲ್ಲಿ ಯೋಗದಿಂದ yoga day ಸಾಮಾಜಿಕ ಸ್ವಾಸ್ಥೃದ ಅರಿವು ಮೂಡಿಸಲು ಹಾಗೂ ಜೂ. 21ರಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಭಾನುವಾರ ಯೋಗ ಜಾಗೃತಿ ನಡಿಗೆ ಏರ್ಪಡಿಸಲಾಗಿತ್ತು.
ಟೈ ಹು-ಧಾ ಮಾಜಿ ಅಧ್ಯಕ್ಷ ಶಶಿಧರ ಶೆಟ್ಟರ್ ಯೋಗ ಜಾಗೃತಿ ನಡಿಗೆಗೆ ಚಾಲನೆ ನೀಡಿದರು. ನಡಿಗೆಯು ಸೆಟಲೈಟ್ ಕಾಂಪ್ಲೆಕ್ಸ್‌ನಿಂದ ಆರಂಭಗೊಂಡು ಕೊಪ್ಪಿಕರ ರಸ್ತೆ, ಕಾರ್ಪೋರೇಷನ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನಪೇಟೆ, ತುಳಜಾಭವಾನಿ ದೇವಸ್ಥಾನ ವೃತ್ತ, ಮರಾಠಗಲ್ಲಿ ವೃತ್ತ, ಕೊಪ್ಪಿಕರ ರಸ್ತೆ ಮೂಲಕ ಮರಳಿ ಸೆಟಲೈಟ್ ಕಾಂಪ್ಲೆಕ್ಸ್‌ನಲ್ಲಿ ಸಂಪನ್ನಗೊಂಡಿತು.
ಯೋಗ ಜಾಗೃತಿ ನಡಿಗೆ ಸಂಚಾಲಕ ಓಂ ಐವಳ್ಳಿ, ಎಸ್‌ಪಿವೈಎಸ್‌ಎಸ್ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಜೋಶಿ, ಜಿಲ್ಲಾ ಸಂಚಾಲಕಿ ಅಮರಾವತಿ ಗಾಣಿಗಿ, ಯೋಗಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ ಇತರರಿದ್ದರು.