yoga centre ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಪತಂಜಲಿ ವತಿಯಿಂದ ಉಚಿತ ಯೋಗ ತರಬೇತಿ ಕೇಂದ್ರ ಪ್ರಾರಂಭಿಸಲಾಯಿತು. ಯೋಗಗುರು ಭವರಲಾಲ್​ ಆರ್ಯ, ಮಹೇಂದ್ರ ಸಿಂಘಿ, ನರೇಶ ಶಾ, ಭವರಲಾಲ್​ ಜೈನ್​, ಸುನಿಲ ಚೌಧರಿ ಇತರರು ಇದ್ದರು. 
ಧಾರವಾಡ

yoga centre ರೋಗಮುಕ್ತ ಜೀವನಕ್ಕೆ ಯೋಗ ಮದ್ದು

ಪ್ರಮುಖ ಮುಖ್ಯಾಂಶಗಳು

  • ಪತಂಜಲಿಯಿಂದ ಯೋಗ ತರಬೇತಿ ಕೇಂದ್ರ
  • ಯೋಗಗುರು ಭವರಲಾಲ್​ ಆರ್ಯ ಮಾರ್ಗದರ್ಶನ
ಹುಬ್ಬಳ್ಳಿ:
ಸಾಮೂಹಿಕ ಹನುಮಾನ್​ ಚಾಲೀಸ ಪಠಣದೊಂದಿಗೆ ಕೇಂದ್ರ ಉದ್ಘಾಟಿಸಲಾಯಿತು. ಯೋಗದಿಂದ ರೋಗಮುಕ್ತ ಜೀವನ ನಡೆಸಬಹುದು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಯೋಗದ ಮಹತ್ವ ತಿಳಿಯಬೇಕು ಎಂದು ಭವರಲಾಲ್ ಆರ್ಯ ಹೇಳಿದರು.
ಉಚಿತ ವಿಶೇಷ ಯೋಗ ಕೇಂದ್ರದಲ್ಲಿ ಬೆಳಗ್ಗೆ 5.30ರಿಂದ 7ರ ವರೆಗೆ ಮತ್ತು ಸಂಜೆ 5ರಿಂದ 6ರ ವರೆಗೆ ಉಚಿತ ಯೋಗ, ಧ್ಯಾನ, ಪ್ರಾಣಾಯಾಮ ತರಬೇತಿ ನೀಡಲಾಗುವುದು. ಉಚಿತ ಯೋಗ ತರಬೇತಿ ಕೇಂದ್ರದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು. ಹೆಚ್ಚಿನ ಮಾಹಿತಿಗೆ ಪತಂಜಲಿ ಕಾರ್ಯಾಲಯ ಸಂಪರ್ಕಿಸಲು ಕೋರಲಾಗಿದೆ.