ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ working journalist ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಉದ್ಘಾಟಿಸಿದರು. 
ಧಾರವಾಡ

working journalist ವಿಶ್ವದ ಪ್ರಬಲ ಆಯುಧ ಪೆನ್ನು

ಹುಬ್ಬಳ್ಳಿ: ವಿಶ್ವದ ಅತ್ಯಂತ ಪ್ರಬಲ working journalist ಆಯುಧ ಪೆನ್ನು. ಅದು ವ್ಯಕ್ತಿ ಮತ್ತು ರಾಷ್ಟ್ರ ಕಟ್ಟುವ ಶಕ್ತಿ ಹಾಗೂ ಹಾಳು ಮಾಡುವ ಸಾಮರ್ಥ್ಯವನ್ನೂ ಹೊಂದಿದೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಅಭಿಪ್ರಾಯಪಟ್ಟರು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾವೃತ್ತಿ ಅತಂತ್ಯ ಪವಿತ್ರವಾದದು. ಸಮಾಜದಲ್ಲಿ ಜಾಗೃತಿ ಮೂಡಿಸಿ, ಸಮೃದ್ಧ ಭಾರತ ನಿರ್ಮಾಣ ಮಾಡುವ ಹೊಣೆ ಪತ್ರಕರ್ತರ ಮೇಲಿದೆ. ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನೀಡುವ ಲೇಖನಗಳು ಬರೆಯುವ ಕೆಲಸವಾಗಬೇಕು ಎಂದರು.
ಡಿಜಿಟಲ್ ಮಾಧ್ಯಮದ ವಿಸ್ತರಣೆಯಿಂದ ಮುದ್ರಣ ಮಾಧ್ಯಮದ ಓದುಗರ ಸಂಖ್ಯೆ ಕಡಿಮೆಯಾಗಿದೆ. ಹಿಂದೆ ದೂರದರ್ಶನದ ಪ್ರಭಾವದಿಂದ ಪತ್ರಿಕೆಗಳ ಓದು ಇಳಿದಿದ್ದರೆ, ಈಗ ಮೊಬೈಲ್ ಹಾಗೂ ಡಿಜಿಟಲ್ ಮಾಧ್ಯಮದ ಬಳಕೆ ಹೆಚ್ಚಿದ್ದು, ಕುಟುಂಬದ ಸದಸ್ಯರ ನಡುವಿನ ಸಂವಹನವೇ ಕಡಿಮೆಯಾಗಿದೆ. ಒಂದೇ ಮನೆಯಲ್ಲಿ ಇದ್ದರೂ ಪ್ರತಿಯೊಬ್ಬರೂ ತಮ್ಮ ಫೋನ್‌ನಲ್ಲಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೊಬೈಲ್ ಫೋನ್ ಬಳಕೆಯಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆ. ನಿದ್ರಾಹೀನತೆ, ಮಾನಸಿಕ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿವೆ. ಆದ್ದರಿಂದ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಇಂದಿನ ಓದುಗರ ಆಸಕ್ತಿ ಮತ್ತು ಅಭಿರುಚಿಯನ್ನು ಅರಿತು ಅದಕ್ಕೆ ತಕ್ಕಂತೆ ಗುಣಮಟ್ಟದ ಬರವಣಿಗೆ ಮೂಡಿದರೆ ಪತ್ರಿಕೋದ್ಯಮಕ್ಕೆ ಮತ್ತೆ ಹೊಸ ಚೈತನ್ಯ ಸಿಗಲಿದೆ. ಯುವ ಪತ್ರಕರ್ತರು ಅಧ್ಯಯನಶೀಲರಾಗಿದ್ದು, ಹೊಸ ಆಲೋಚನೆಗಳೊಂದಿಗೆ ಸಮಾಜಮುಖಿ ಬರಹಗಳನ್ನು ನೀಡಬೇಕು ಎಂದು ತಿಳಿವಳಿಕೆ ನೀಡಿದರು.
ಪತ್ರಕರ್ತರು ಹಾಗೂ ಪ್ರಕಾಶಕರು ಉತ್ತಮ ಲೇಖಕರನ್ನು ಬೆಳೆಸಲು ಆದ್ಯತೆ ನೀಡಬೇಕು. ವಿವಿಧ ಕ್ಷೇತ್ರಗಳಲ್ಲಿ ನಿವೃತ್ತರಾದ ಪರಿಣಿತರ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಲು ಪ್ರಯತ್ನಿಸಬೇಕು. ಇದು ಮುಂದಿನ ಪೀಳಿಗೆಗೆ ಅಮೂಲ್ಯ ಸಂಪತ್ತಾಗಲಿದೆ. ಓದುವ ಸಂಸ್ಕೃತಿ ಮತ್ತು ಗುಣಮಟ್ಟದ ಬರವಣಿಗೆ ಎಂದಿಗೂ ನಶಿಸುವುದಿಲ್ಲ ಎಂದರು.
ಕೆಎಲ್‌ಇ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಪತ್ರಕರ್ತರು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು. ಹೊಸದಾಗಿ ನಿರ್ಮಾಣವಾಗಿರುವ ಜೆಜಿಎಂಎಂ ಮೆಡಿಕಲ್ ಕಾಲೇಜ್ ವತಿಯಿಂದ ಪತ್ರಕರ್ತರು ಮತ್ತು ಕುಟುಂಬದವರಿಗೆ ‘ಹೆಲ್ತ್ ಕಾರ್ಡ್’ ನೀಡುವ ಭರವಸೆ ಕೊಟ್ಟರು.
ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಟ್ಟಡದ ನವೀಕರಣಕ್ಕೆ ನೆರವು ಹಾಗೂ ಹೆಲ್ತ್ ಕಾರ್ಡ್ ನೀಡುವ ಬೇಡಿಕೆಯನ್ನು ಮುಖ್ಯ ಅತಿಥಿಗಳ ಮುಂದಿಟ್ಟರು.
ಹಿರಿಯ ಪತ್ರಕರ್ತ ಗಣೇಶ ಜೋಶಿ ಅವರಿಗೆ ‘ಜೀವಮಾನ ಸಾಧನೆ’, ‘ವಿಜಯವಾಣಿ’ಯ ಮಂಜುನಾಥ ಅಂಗಡಿ ಹಾಗೂ ನಾಗರಾಜ ಕುಂಕೂರು ಸೇರಿದಂತೆ ಇತರರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಸಂಘದ ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಬಸವರಾಜ ಕಟ್ಟಿಮನಿ, ಗಣಪತಿ ಗಂಗೊಳ್ಳಿ, ಪ್ರಧಾನ ಕಾರ್ಯದರ್ಶಿ ಗುರು ಭಾಂಡಗೆ, ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ, ಇತರರಿದ್ದರು.