womens day ಹುಬ್ಬಳ್ಳಿಯ ವಿದ್ಯಾನಗರ ಐಬಿಎಂಆರ್ ಬಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಐಬಿಎಂಆರ್ ಸಹಾಯಕ ಪ್ರಾಧ್ಯಾಪಕಿ ಪ್ರೊ. ಶಾರದಾ ಎಸ್. ಡಂಬಳ ಮಾತನಾಡಿದರು. ಪ್ರಾಚಾರ್ಯ ಡಾ. ಶಂಕರ ಚಕ್ರವರ್ತಿ, ಆಯೇಶಾ ಎಂ, ಪ್ರವಿಣ ಟಿ, ಅಭಿಷೇಕ, ಇತರರು ಇದ್ದರು.
- ಐಬಿಎಂಆರ್ನಲ್ಲಿ ಮಹಿಳಾ ದಿನಾಚರಣೆ
- ಪ್ರೊ. ಶಾರದಾ ಎಸ್. ಡಂಬಳ ಅಭಿಮತ
ಹುಬ್ಬಳ್ಳಿ: womens day ಅನೇಕ ಸವಾಲುಗಳ ಮಧ್ಯೆಯೂ ಇಂದು ಮಹಿಳೆಯು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ, ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಅಗಾಧ ಸಾಧನೆ ಮಾಡುತ್ತಿದ್ದಾಳೆ, ಈ ಮೂಲಕ ದೇಶದ ಅಭಿವೃದ್ಧಿಗೆ ಮಹೋನ್ನತ ಕೊಡುಗೆ ನೀಡುತ್ತಿದ್ದಾಳೆ ಎಂದು ಐಬಿಎಂಆರ್ ಸಹಾಯಕ ಪ್ರಾಧ್ಯಾಪಕಿ ಪ್ರೊ. ಶಾರದಾ ಎಸ್. ಡಂಬಳ ಹೇಳಿದರು.
ಇಲ್ಲಿಯ ವಿದ್ಯಾನಗರ ಐಬಿಎಂಆರ್ ಬಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಕೃತಿಯಲ್ಲಿ ಹೆಣ್ಣು- ಗಂಡು ಸರಿಸಮಾನರು, ಸಮಾಜಕ್ಕೆ ಇವರು ಎರಡು ಕಣ್ಣುಗಳಿದ್ದಂತೆ, ಸಾಮಾಜಿಕ ಅಭಿವೃದ್ಧಿಯಲ್ಲಿ ಇವರಿಬ್ಬರ ಪಾತ್ರ ಬಹಳ ಮುಖ್ಯವಾಗುತ್ತದೆ, ಇಂದಿನ ಸಮಾಜ ಕೂಡ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು ಎಂದರು.
ಪ್ರೊ. ಆಯೇಶಾ ಮೂಲಿಮನಿ, ರವೀಂದ್ರ ಮುದ್ದಿ, ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಶಂಕರ ಚಕ್ರವರ್ತಿ, ಹೆಣ್ಣಿಗೆ ತಾಳ್ಮೆ, ಸಹನೆ ಎಂಬುದು ದೇವರು ಕೊಟ್ಟ ವರ, ಸಮಾಜದ ಬೆಳವಣಿಗೆಯಲ್ಲಿ ಸ್ತ್ರೀಯರ ಪಾತ್ರ ಬಹಳ ದೊಡ್ಡದು, ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ ಎಂದು ಹೇಳಿದರು.
ಐಬಿಎಂಆರ್ ಸಂಸ್ಥೆಯ ಟ್ರಸ್ಟಿ ಸುಮಾ ಮಹೇಂದ್ರಕರ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ. ಪ್ರವೀಣ ಟಿ, ಪ್ರೊ. ಅಭಿಷೇಕ ದೊಡ್ಡಮನಿ ಪಾಲ್ಗೊಂಡಿದ್ದರು.