women reservation ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಪೂರ್ಣಿಮಾ ಪ್ರಕಾಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಧಾರವಾಡ

women reservation ಮಹಿಳಾ ಮೀಸಲಾತಿ ಎಲ್ಲರೂ ಒಪ್ಪುವ ಸಂಗತಿ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಪೂರ್ಣಿಮಾ ಪ್ರಕಾಶ
ಹುಬ್ಬಳ್ಳಿ: women reservation ಮಹಿಳಾ ಮೀಸಲಾತಿಯು ಬಹುದಿನಗಳ ಕನಸಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ನಾರಿಶಕ್ತಿ ವಂದನ ಅಧಿನಿಯಮದ ಮೂಲಕ ಜಾರಿಗೆ ತರಲು ಮುಂದಾಗಿರುವುದು ಎಲ್ಲರ ಮನ ಒಪ್ಪುವ ವಿಷಯವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಪೂರ್ಣಿಮಾ ಪ್ರಕಾಶ ಅಭಿಪ್ರಾಯಪಟ್ಟರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಕಾನೂನು ಸಾಮಾಜಿಕ ನ್ಯಾಯದ ಭಾಗವಾಗಿದೆ. ಹಿಂದೆ ಬಹಳ ಸಲ ಈ ಬಿಲ್​ ಸಂಸತ್​ ಗೆ ಬಂದು ಹೋಗಿದೆ. ಇದಕ್ಕಾಗಿ ಮೋದಿ ಅವರು ಎಲ್ಲ ಪಕ್ಷಗಳ ವಿಶ್ವಾಸದೊಂದಿಗೆ ಮಂಡಿಸಲು ಮುಂದಾಗಿದ್ದಾರೆ. ಇದು ದೇಶದ ಮಹಿಳೆಯರಿಗೆ ಸಂದ ಗೌರವವಾಗಲಿದೆ ಎಂದರು.
ಹೆಣ್ಣು ಮಕ್ಕಳನ್ನು ನಿರ್ಣಯ ಪ್ರಕ್ರಿಯೆಯಲ್ಲಿ ತೊಡಗಿಸುವುದು, 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ಸಂಕಲ್ಪಕ್ಕೆ ಮಹತ್ವದ ಹೆಜ್ಜೆಯಾಗಲಿದೆ. ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ವಿಶೇಷ ಅವಕಾಶಗಳನ್ನು ಮಹಿಳೆಯರಿಗೆ ನೀಡುತ್ತ ಬಂದಿದೆ. ಈಗ ವಿಶೇಷ ಅಧಿವೇಶನ ಕರೆದು ಮಹಿಳಾ ಮೀಸಲು ಅಧಿನಿಯಮ ಪ್ರಸ್ತಾಪಿಸಲು ಮುಂದಾಗಿದೆ. ರಾಜ್ಯದಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಸಹ ಬಹಳಷ್ಟು ಯೋಜನೆಗಳನ್ನು ಮಹಿಳೆಯರಿಗಾಗಿ ತಂದಿದ್ದರು ಎಂದು ಸ್ಮರಿಸಿದರು.
ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, ಸಂಸತ್ತಿನ ಎಲ್ಲ ಸದಸ್ಯರ ಬೆಂಬಲದೊಂದಿಗೆ ನಾರಿಶಕ್ತಿ ವಂದನ ಬಿಲ್​ ತರಲು ಮೋದಿಜಿ ಹೊರಟಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಈ ಹಿಂದೆ ಸಂಸದೀಯ ಸಚಿವರಾಗಿದ್ದಾಗ ಬಿಲ್​ ರಚನೆಗೆ ಶ್ರಮಿಸಿದ್ದರು. ಇದೀಗ ಎಲ್ಲರ ಪ್ರಯತ್ನದಿಂದ ಸಂಸತ್​ನಲ್ಲಿ ಬಿಲ್​ ಪಾಸ್​ ಆಗಲಿ ಎಂಬುದು ನಮ್ಮೆಲ್ಲರ ಆಶಯ ಎಂದರು.