ಸಚಿವ Will quit politics ಜಮೀರ ಅಹ್ಮದ್ ಖಾನ್
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಬಿಜೆಪಿಯವರಿಗೆ ಗ್ಯಾರಂಟಿ ಯೋಜನೆಗಳ ಒತ್ತಡವೂ ಇರಲಿಲ್ಲ. ಆದರೂ, ಅವರು ಬಡವರಿಗೆ ಒಂದೇ ಮನೆ ಕೊಟ್ಟಿಸಿ ಕೊಟ್ಟಿಲ್ಲ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ನಾವು ಗ್ಯಾರಂಟಿ ಯೋಜನೆಗಳ ನಡುವೆಯೂ ಬಡವರಿಗೆ ಮನೆ ಕಟ್ಟಿಸಿ ಕೊಡುತ್ತಿದ್ದೇವೆ ಎಂದರು.
2024ರಲ್ಲಿ ಬೋರ್ಡ್ನಿಂದ 36 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದೇವೆ. ಇದೀಗ 42 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಿದ್ದೇವೆ. ಪ್ರತಿ ಜಿಲ್ಲೆಗೆ ಎಷ್ಟು ಮನೆಗಳನ್ನು ಕೊಟ್ಟಿದ್ದೇವೆ ಎಂಬುದರ ಬಗ್ಗೆ ಡಾಟಾ ಇಟ್ಟಿದ್ದೇವೆ. ಈ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಪರಿಶೀಲಿಸಬಹುದು. ಅವರಿಗೆ ನೇರವಾಗಿ ಅಥವಾ ವಿಡಿಯೋ ಕಾನ್ಪರೆನ್ಸ್ ಮೂಲಕ ತೋರಿಸಲು ನಾವು ಸಿದ್ಧರಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬ್ಯಾನರ್ ಅಳವಡಿಕೆ ಸಂಬಂಧ ಬಳ್ಳಾರಿಯಲ್ಲಿ ಅಷ್ಟು ದೊಡ್ಡ ಘಟನೆ ನಡೆಯಬಾರದಿತ್ತು. ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಬೇಕೆಂಬುದು ಬಹಳ ವರ್ಷಗಳ ಹಿಂದಿನ ಬೇಡಿಕೆಯಾಗಿದೆ. ಈ ಸಂಬಂಧ ಬಿಜೆಪಿ ನಾಯಕ, ಮಾಜಿ ಸಚಿವ ಜನಾರ್ದನ ರೆಡ್ಡಿ ದೊಡ್ಡ ಮನಸ್ಸು ಮಾಡಿ ಕಾಂಗ್ರೆಸ್ ಶಾಸಕ ಭರತ ರೆಡ್ಡಿ ಬೆಂಬಲಿಗರಿಗೆ ಬ್ಯಾನರ್ ಹಾಕಲು ಅವಕಾಶ ನೀಡಿದ್ದರೆ ಗಲಾಟೆ ಆಗುತ್ತಿರಲಿಲ್ಲ. ಈಗ ಬಿಜೆಪಿಯವರು ಪಾದಯಾತ್ರೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
2028ರವರೆಗೆ ಸಿಎಂ ಖುರ್ಚಿ ಖಾಲಿ ಇಲ್ಲ. ಆದರೆ, ನಮ್ಮದು ಹೈಕಮಾಂಡ್ ಪಕ್ಷ. ಅವರು ಬೀದಿ ದಾಸಯ್ಯನನ್ನು ತಂದು ಮುಖ್ಯಮಂತ್ರಿಯನ್ನಾಗಿ ಮಾಡಿದರೂ ನಾವು ಒಪ್ಪಿಕೊಳ್ಳುತ್ತೇವೆ. ಹೀಗೆ ಸಿಎಂ ಆದವರಿಗೆ ಶಾಸಕ ಅಥವಾ ಎಂಎಲ್ಸಿ ಆಗಲು 6 ತಿಂಗಳುಗಳ ಕಾಲಾವಕಾಶ ಇರುತ್ತದೆ ಎಂದು ಹೇಳಿದರು.