Drinking water system for wildlife
ಮಂಜುನಾಥ ಎಸ್. ಅಂಗಡಿ ಧಾರವಾಡ
ಧಾರವಾಡ ಜಿಲ್ಲೆಯ ಕೆಲ ತಾಲೂಕುಗಳು ಅರಣ್ಯದಿಂದ ಆವೃತವಾಗಿವೆ. ಧಾರವಾಡ, ಕಲಟಗಿ, ಅಳ್ನಾವರ ಸೇರಿ ಹುಬ್ಬಳ್ಳಿ ತಾಲೂಕಿನ ಕೆಲ ಭಾಗದಲ್ಲಿ ಅರಣ್ಯವಿದೆ. ಬೇಸಿಗೆ ಆರಂಭವಾಗಿದ್ದು, ಕಾಡುಗಳಲ್ಲಿನ ಜಲಮೂಲಗಳು ಬತ್ತಿ ಹೋಗಿವೆ. ವನ್ಯಜಿವಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಲು ಅರಣ್ಯ ಇಲಾಖೆಯಿಂದ ಕಾಡುಗಳಲ್ಲಿ ಕಾಯಂ ನೀರಿನ ತೊಟ್ಟಿಗಳ ನಿರ್ಮಾಣ ಮಾಡಲಾಗಿದೆ.
2025& 26ನೇ ಸಾಲಿನಲ್ಲಿ ಧಾರವಾಡ ಪ್ರಾದೇಶಿಕ ವಿಭಾಗ ವ್ಯಾಪ್ತಿಯಲ್ಲಿ ತಾಲೂಕಿನ ರಾಮಾಪುರ, ಮಂಡಿಹಾಳ, ಬಣದೂರು, ಕಲಕೇರಿ, ಮಾವಿನಕೊಪ್ಪ ಮತ್ತು ರಾಗಿಕಲ್ಲಾಪುರ ಗ್ರಾಮಗಳ ವ್ಯಾಪ್ತಿಯ ಅರಣ್ಯದಲ್ಲಿ ಸಿಮೆಂಟ್ ಜಲತೊಟ್ಟಿಗಳನ್ನು ನಿಮಿರ್ಸಲಾಗಿದೆ. ಪ್ರಾದೇಶಿಕ ವಿಭಾಗ ವ್ಯಾಪ್ತಿಯಲ್ಲಿ ಮಾನವ- ವನ್ಯಜಿವಿ ಸಂಘರ್ಷ ನಿರ್ವಹಣೆ ಲೆಕ್ಕಶಿಷಿರ್ಕೆಯಡಿ ಸಿಮೆಂಟ್ ಜಲತೊಟ್ಟಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಈ ರೀತಿ ಧಾರವಾಡ ಪ್ರಾದೇಶಿಕ ವಿಭಾಗ ವ್ಯಾಪ್ತಿಯಲ್ಲಿ 2020- 21ರಿಂದ 2025- 26ರವರೆಗೆ 34 ಲಕ್ಷ ರೂಪಾಯಿ ವೆಚ್ಚದಲ್ಲಿ ಒಟ್ಟು 25 ಸಿಮೆಂಟ್ ಜಲತೊಟ್ಟಿಗಳನ್ನು ನಿಮಿರ್ಸಲಾಗಿದೆ.
ಮಾನವ- ವನ್ಯಜಿವಿ ಸಂಘರ್ಷ ತಡೆ:
ಧಾರವಾಡ, ಕಲಟಗಿ, ಅಳ್ನಾವರ ತಾಲೂಕುಗಳು ಮತ್ತು ಹುಬ್ಬಳ್ಳಿ ತಾಲೂಕಿನ ಕೆಲ ಭಾಗ ಅರಣ್ಯಕ್ಕೆ ಹೊಂದಿಕೊಂಡಿದೆ. ಬೇಸಿಗೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಯಿಂದ ಕಾಡುಪ್ರಾಣಿಗಳು ನಾಡಿಗೆ ಬಂದ ನಿದರ್ಶನಗಳಿವೆ. ಇದನ್ನು ತಪ್ಪಿಸಲು ಕಾಡಿನ ಮಧ್ಯೆ ನೆರಳು ಇರುವ ಪ್ರದೇಶದಲ್ಲಿ ಕಾಯಂ ಸಿಮೆಂಟ್ ತೊಟ್ಟಿಗಳನ್ನು ನಿಮಿರ್ಸಲಾಗಿದೆ. ಇವುಗಳನ್ನು ತುಂಬಿಸಲು ಅರಣ್ಯ ವಾಚರ್ಗಳಿಗೆ ಜವಾಬ್ದಾರಿ ನೀಡಲಾಗಿದೆ. ಟ್ಯಾಂಕರ್ಗಳನ್ನು ಬಳಸಿ ವಾರಕ್ಕೊಮ್ಮೆ ನೀರು ತುಂಬಿಸಲಾಗುತ್ತಿದೆ. ನೀರು ಗಲೀಜಾಗಿದ್ದರೆ ಟ್ಯಾಂಕ್ ತೊಳೆದು ಮರುಭರಣ ಮಾಡಲು ಸೂಚಿಸಲಾಗಿದೆ. ಅರಣ್ಯ ಇಲಾಖೆಯ ಕಾರ್ಯ ವನ್ಯಪ್ರಾಣಿಗಳ ಜಲದಾಹ ನೀಗಿಸುವುದಲ್ಲದೆ, ಮಾನವ- ವನ್ಯಜಿವಿ ಸಂರ್ಷ ತಡೆಗೂ ನೆರವಾಗುತ್ತಿದೆ.
ಕಳೆದ ವರ್ಷದ ಬೇಸಿಗೆಯಲ್ಲಿ ಅರಣ್ಯ ಇಲಾಖೆಯಿಂದ ನಿಮಿರ್ಸಿದ ಜಲತೊಟ್ಟಿಗಳ ಪಕ್ಕ ಕ್ಯಾಮರಾಗಳನ್ನು ಫಿಕ್ಸ್ ಮಾಡಲಾಗಿತ್ತು. ಮಂಗ, ಜಿಂಕೆ, ಕರಡಿ, ಮುಂಗುಸಿ, ನರಿ ಸೇರಿ ಇತರ ಕಾಡುಪ್ರಾಣಿಗಳು ಮತ್ತು ವಿವಿಧ ಪ್ರಭೇದದ ಪಗಳು ನೀರು ಕುಡಿಯುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಬಾರಿಯೂ ಕ್ಯಾಮರಾಗಳನ್ನು ಅಳವಡಿಸುವ ಯೋಜನೆ ಇದೆ ಎನ್ನುತ್ತಾರೆ ಧಾರವಾಡ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಿರಣಕುಮಾರ ಕರತಂಗಿ.
ಬೇಸಿಗೆಯಲ್ಲಿ ವನ್ಯಜಿವಿಗಳು ನೀರು ಅರಸಿ ನಾಡಿಗೆ ಬರುವ ಸಂಭವವಿರುತ್ತದೆ. ಇದನ್ನು ತಪ್ಪಿಸಲು ಇಲಾಖೆಯ ಮಾನವ- ವನ್ಯಜಿವಿ ಸಂಘರ್ಷ ನಿರ್ವಹಣೆ ತಡೆ ಲೆಕ್ಕಶಿಷಿರ್ಕೆಯಡಿ ನೆಲಮಟ್ಟದ ಕಾಯಂ ಸಿಮೆಂಟ್ ನೀರಿನ ಟ್ಯಾಂಕ್ಗಳನ್ನು ನಿಮಿರ್ಸಲಾಗಿದೆ. ವಾಚರ್ಗಳು ನಿಯಮಿತವಾಗಿ ಟ್ಯಾಂಕರ್ ಬಳಸಿ ಟ್ಯಾಂಕ್ಗಳನ್ನು ತುಂಬಿಸುತ್ತಿದ್ದು, ಕಾಡು ಪ್ರಾಣಿ, ಪಗಳ ಜಲದಾಹ ನೀಗಿಸಲಾಗುತ್ತಿದೆ.