ಹುಬ್ಬಳ್ಳಿ ತಾರಿಹಾಳ (waste of water) ಬೈಪಾಸ್ ಬಳಿ ರಸ್ತೆಯಲ್ಲಿ ಹರಿಯುತ್ತಿರುವ ನೀರು. 
ಧಾರವಾಡ

ವ್ಯರ್ಥವಾಗುತ್ತಿದ್ದರೂ (waste of water) ಯಾರಿಗೂ ಚಿಂತೆಯಿಲ್ಲ

ಸಂತೋಷ ವೈದ್ಯ
ಹುಬ್ಬಳ್ಳಿ: ಈ ಮಳೆಗಾಲದಲ್ಲೂ ನಗರದ (waste of water) ಹಲವು ಬಡಾವಣೆಗಳಲ್ಲಿ ಪ್ರತಿ 7-8 ದಿನಗಳಿಗೊಮ್ಮೆ ನೀರು ಪೂರೈಸುವಂಥ ದುಸ್ಥಿತಿ ಇದೆ. ಆದರೆ, ಕಳೆದ 3 ದಿನಗಳಿಂದ ತಾರಿಹಾಳ ಬೈಪಾಸ್ ಬಳಿ ರಸ್ತೆಯಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರೂ ಯಾರಿಗೂ ಚಿಂತೆಯಿಲ್ಲ.
ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಪ್ರವೇಶಿಸುವ ಬೈಪಾಸ್ ಸೇತುವೆ ಬಳಿ ಪೈಪ್​ಲೈನ್ ಒಡೆದು ಹೋಗಿರುವ ಪರಿಣಾಮ ನೀರು ರಭಸದಿಂದ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇದನ್ನು ನೋಡಿದರೆ ನಗರದಲ್ಲಿ ಎಲ್ಲಿಯೂ ನೀರಿನ ಕೊರತೆ ಇಲ್ಲ ಅಥವಾ ನೀರು ಪೂರೈಕೆ ಸಮೃದ್ಧವಾಗಿದೆ ಎಂದು ಆಡಳಿತ ವರ್ಗ ಭಾವಿಸಿದಂತಿದೆ. ಕೊಳವೆ ಮಾರ್ಗ ದುರಸ್ತಿ ಮಾಡುವ ಕನಿಷ್ಠ ಪ್ರಯತ್ನ ನಡೆದಿಲ್ಲ. ಸತತ ನೀರು ಹರಿದು ರಸ್ತೆಗಳು ಹದಗೆಟ್ಟಿವೆ. ಅಕ್ಕ ಪಕ್ಕದ ತಗ್ಗು ಪ್ರದೇಶ, ಹೊಲಗಳಲ್ಲಿ ನೀರು ಸಂಗ್ರಹವಾಗಿದೆ. ವಾಹನಗಳ ಓಡಾಟದಿಂದ ಪರಿಸ್ಥಿತಿ ಇನ್ನಷ್ಟು ಹಾಳಾಗಿದೆ.
ಹು-ಧಾ ಅವಳಿ ನಗರದ ಎಲ್ಲ ಬಡಾವಣೆಗಳಿಗೆ ನಿರಂತರ ನೀರು ಪೂರೈಸುವ ಕಾಮಗಾರಿ ಕಳೆದ 5 ವರ್ಷಗಳಿಂದ ಪ್ರಗತಿಯಲ್ಲಿದೆ. ಈ ಕಾಮಗಾರಿಯ ಗುತ್ತಿಗೆ ಪಡೆದಿರುವ ಎಲ್ ಆಂಡ್ ಟಿ ಕಂಪನಿಗೆ ನೀರು ಸರಬರಾಜು ವ್ಯವಸ್ಥೆಯನ್ನು ಹಸ್ತಾಂತರಿಸಲಾಗಿದೆ. ಪೈಪ್​ಲೈನ್ ಒಡೆದರೆ ಸರಿಪಡಿಸಬೇಕಾದವರು ಇವರೇ. ಮೇಲ್ವಿಚಾರಣೆ ನಡೆಸಬೇಕಾದವರು ನೋಡಲ್ ಏಜೆನ್ಸಿ ಕೆಯುಐಡಿಎಫ್​ಸಿ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್)ಯಲ್ಲಿ ವ್ಯಸ್ತರಾಗಿದ್ದಾರೆ.
ಯಾವುದೇ ವಿಳಂಬಕ್ಕೆ ನಮ್ಮ ಅಧಿಕಾರಿ ಹಾಗೂ ಸಿಬ್ಬಂದಿ ಎಸ್​ಐಆರ್​ಗೆ ಹೋಗಿದ್ದಾರೆ ಎಂಬ ಉತ್ತರ ಪಾಲಿಕೆಯಿಂದ ಬರುತ್ತದೆ. ಫ್ಲೈ ಓವರ್ ಕಾಮಗಾರಿ ವಿಳಂಬದ ಬಗ್ಗೆ ಪ್ರತಿ ಎರಡು ತಿಂಗಳಿಗೊಮ್ಮೆ ಸ್ಥಳ ಪರಿಶೀಲನೆ ಹಾಗೂ ಸಭೆ ನಡೆಸುವ ಜನಪ್ರತಿನಿಧಿಗಳು ಅವಳಿ ನಗರದ ನೀರು ಪೂರೈಕೆ ವ್ಯವಸ್ಥೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದೇ ಕಾರಣಕ್ಕೆ ಎಲ್ ಆಂಡ್ ಟಿ ಕಂಪನಿ ಡೋಂಟ್ ಕ್ಯಾರ್ ಧೋರಣೆ ತಾಳಿದಂತಿದೆ. ಹಾಗಾಗಿ ಇತ್ತೀಚೆಗೆ ಮಲಪ್ರಭಾದಿಂದ ಹೆಚ್ಚುವರಿಯಾಗಿ 43 ಎಂಎಲ್​ಡಿ ನೀರು ಪಂಪ್ ಮಾಡುತ್ತಿದ್ದರೂ ಪ್ರತಿ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ.