walkthan rally ಸಂಜೀವಿನ ಆಯುರ್ವೇದ ಕಾಲೇಜಿನ ಅಧ್ಯಕ್ಷ ಡಾ. ಶ್ರೀನಿವಾಸ ಬನ್ನಿಗೋಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
- ಹುಬ್ಬಳ್ಳಿಯಲ್ಲಿ ವಾಕಥಾನ್ ಬೈಕ್ ರ್ಯಾಲಿ
- ಅಂಗಾಂಗ ದಾನದ ಕುರಿತು ಜಾಗೃತಿ
ಹುಬ್ಬಳ್ಳಿ: walkthan rally ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಬೋದ್ ಫೌಂಡೇಷನ್,
ಕಂಟ್ರೋಲ್ ಬ್ಯೂರೋ ಸಹಯೋಗದಲ್ಲಿ ಆ. 9ರಂದು ಬೆಳಗ್ಗೆ 7.30ಕ್ಕೆ ನಶಾ ಮುಕ್ತ ಭಾರತ, ಯುವ ಶುದ್ಧಿ ಅಭಿಯಾನ ವಾಕಥಾನ್ ಹಾಗೂ ಬೈಕ್ ರ್ಯಾಲಿಯನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಜೀವಿನ ಆಯುರ್ವೇದ ಕಾಲೇಜಿನ ಅಧ್ಯಕ್ಷ ಡಾ. ಶ್ರೀನಿವಾಸ ಬನ್ನಿಗೋಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾನಗರದ ಬಿವಿಬಿ ಕ್ಯಾಪಸ್ನಲ್ಲಿರುವ ಶುಶ್ರೂಷಾ ವಿಜ್ಞಾನ ಮಹಾವಿದ್ಯಾಲಯದ ಮೈದಾನದಲ್ಲಿ ಬೆಳಗ್ಗೆ 7.30ಕ್ಕೆ ಸಮಾವೇಶಗೊಂಡು ವಿದ್ಯಾರ್ಥಿಗಳು ವಾಕಥಾನ್ನಲ್ಲಿ ಪಾಲ್ಗೊಳ್ಳುವರು. 40ಕ್ಕೂ ಹೆಚ್ಚು ಸಂಸ್ಥೆಗಳ 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಜನರು ಭಾಗಿಯಾಗುವರು ಎಂದರು.
ವಾಕಥಾನ್ ಕಾಡಸಿದ್ದೇಶ್ವರ ಕಾಲೇಜು ಎದುರಿನ ಬಿಗ್ ಮಿಶ್ರಾ ಬಳಿಯಿಂದ ಶಿರೂರ ಪಾರ್ಕ್ ರೋಡ ಮೂಲಕ ತೋಳನಕೆರೆ ವರೆಗೂ ಸಾಗಲಿದೆ. ಅಲ್ಲಿಂದ ಶಿಕ್ಷಕರು, ವೈದ್ಯರು ಬೈಕ್ ರ್ಯಾಲಿ ಮೂಲಕ ಧಾರವಾಡವರೆಗೂ ಸಾಗಲಿದ್ದಾರೆ ಎಂದು ಹೇಳಿದರು.
ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು, ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸುವುದು ಹಾಗೂ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರ್ಯಾಲಿಗೆ ಚಾಲನೆ ನೀಡುವರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುವರು. ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸುವರು. ರುದ್ರಾಕ್ಷಿಮಠದ ಶ್ರೀಬಸವಲಿಂಗ ಸ್ವಾಮೀಜಿ, ಇಳಕಲ್ ವಿಜಯಮಹಾಂತ ಸಂಸ್ಥಾನ ಮಠದ ಡಾ. ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ. ವಿ.ಎಸ್.ವಿ. ಪ್ರಸಾದ, ಇತರರು ಪಾಲ್ಗೊಳ್ಳುವರು.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಪತಿ ಡಾ. ಭಗವಾನ್ ಬಿ.ಸಿ. ಅವರು ದಿಕ್ಸೂಚಿ ಭಾಷಣ ಮಾಡಿ ಪ್ರತಿಜ್ಞಾ ವಿಧಿ ಬೋಧಿಸುವರು.
ಡಾ. ಎಂ. ಜೀವಣ್ಣವರ, ಡಾ. ಕ್ರಾಂತಿಕಿರಣ, ಡಾ. ಪ್ರಶಾಂತ ಎ.ಎಸ್., ಡಾ. ಸತೀಶ ಇರಕಲ್, ಡಾ. ಸಿದ್ದನಗೌಡ ಪಾಟೀಲ, ಡಾ. ಸಂಜಯ ಪೀರಾಪುರ, ಡಾ. ರೈಚೆಲ್ ಡಿ. ಗೋಷ್ಠಿಯಲ್ಲಿದ್ದರು.