ವಿವೇಕಾನಂದರ ಜಯಂತಿ ನಿಮಿತ್ತ ಉಣಕಲ್ ಕೆರೆ ಮಧ್ಯದಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿ ಮುಂದೆ ನಿಂತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಮಹೇಶ ಟೆಂಗಿನಕಾಯಿ ಸಮೇತ ಹಲವರು ಸೋಮವಾರ ಜೈಕಾರ ಮೊಳಗಿಸಿದರು. 
ಧಾರವಾಡ

(vivekananda) ವಿವೇಕಾನಂದರ ಸಂದೇಶ ಯುವಕರಿಗೆ ಪ್ರೇರಣೆ

ಹುಬ್ಬಳ್ಳಿ: ಸಿಡಿಲ ಸಂತ ಸ್ವಾಮಿ ವಿವೇಕಾನಂದರ (vivekananda) ಸಂದೇಶ ನಮ್ಮ ದೇಶ ಹಾಗೂ ಯುವಕರಿಗೆ ಪ್ರೇರಣೆಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಣ್ಣಿಸಿದರು.
ವಿವೇಕಾನಂದರ ಜಯಂತಿ ನಿಮಿತ್ತ ಇಲ್ಲಿಯ ಉಣಕಲ್ ಕೆರೆ ಮಧ್ಯದಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಸೋಮವಾರ ಪುಷ್ಪ ನಮನ ಸಲ್ಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿವೇಕಾನಂದರು ಬ್ರಿಟೀಷರ ಕಾಲದಲ್ಲಿ ವಿದೇಶಾಂಗ ನೀತಿಗೆ ಶಕ್ತಿ ತುಂಬಿದ್ದರು. ದಾಸ್ಯದಲ್ಲಿದ್ದ ಭಾರತದ ಅಂತಃಶಕ್ತಿಯನ್ನು ಪ್ರಪಂಚಕ್ಕೆ ಪರಿಚಯಿಸಿದ್ದರು. ಶಿಕ್ಷಣ, ಸಂಘಟನೆಯಿಂದ ದೇಶವನ್ನು ಬದಲಾಯಿಸಬಹುದು ಎಂಬುದು ಇಂದಿಗೂ ಸತ್ಯವಾಗಿದೆ. ರಾಮಕೃಷ್ಣ ಪರಮಹಂಸರ ಬಳಿ ಸನ್ಯಾಸತ್ವ ಪಡೆದು ಚಿಕ್ಕ ವಯಸ್ಸಿನಲ್ಲಿಯೇ ವಿದ್ವತ್ ಪಡೆದಿದ್ದರು. ಜೀವಿತಾವಧಿ 39 ವರ್ಷವಾಗಿದ್ದರೂ ಶತಶತಮಾನಗಳವರೆಗೆ ಅವರ ಸಂದೇಶಗಳು ದೇಶ, ಪ್ರಪಂಚಕ್ಕೆ ಅಗತ್ಯವಾಗಿವೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಬೀರಪ್ಪ ಖಂಡೇಕರ, ಮಲ್ಲಿಕಾರ್ಜುನ ಗುಂಡೂರ, ಉಮೇಶ ಕೌಜಗೇರಿ, ಉಮಾ ಮುಕುಂದ, ಮೀನಾಕ್ಷಿ ಒಂಟಮೂರಿ, ಪ್ರಮುಖರಾದ ಪ್ರವೀಣ ಪವಾರ, ರಾಜು ಕೋರ್ಯಾಣಮಠ, ವಿಜಯಾ ಗುಡಗೇರಿ ಇತರರು ಇದ್ದರು.