ಕಲಘಟಗಿ ತಾಲೂಕಿನ ಸೊಲ್ಲಾರಗೊಪ್ಪ ಗ್ರಾಮದ ರೈತ ಪ್ರವೀಣ ಜಾಬಿನ್‌ಹೊಲಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಭೇಟಿ ನೀಡಿ ಹಾನಿ ಪರಿಶೀಲಿಸಿದರು. ಯಲ್ಲಾರಿ ಶಿಂಧೆ, ಅಣ್ಣಪ್ಪ ಓಲೇಕಾರ, ಕಿರಣ ಪಾಟೀಲ ಕುಲಕರ್ಣಿ, ರವಿ ಅಲ್ಲಾಪುರ, ಸುರೇಶ ಶೀಲವಂತರ ಇತರರಿದ್ದರು. 
ಧಾರವಾಡ

ಹಾನಿಗೊಳಗಾದ ಕಬ್ಬು ಬೆಳೆಗಾರರ ನೋವಿಗೆ ಸ್ಪಂದಿಸಲಿ

ಮಂಜುನಾಥ ಗದಗಿನ
ಕಲಘಟಗಿ: ತಾಲೂಕಿನಲ್ಲಿ ಕಬ್ಬಿನ ಗದ್ದೆಗಳಿಗೆ ಬೆಂಕಿ ಬಿದ್ದು, ರೈತರು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸದೆ ಇರುವುದರು ನೋವಿನ ಸಂಗತಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಹೇಳಿದರು.
ತಾಲೂಕಿನ ಜಿನ್ನೂರು, ಸೊಲ್ಲಾರಗೊಪ್ಪ ಹಾಗೂ ಭೂಗೇನಾಗರಕೊಪ್ಪ ಗ್ರಾಮಗಳಲ್ಲಿ ಕಬ್ಬಿನ ಗದ್ದೆ ಬೆಂಕಿ ಬಿದ್ದು ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಗದ್ದೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ತಾಲೂಕಿನ ಬಹುತೇಕ ಹೊಲಗಳಿಗೆ ಭೇಟಿ ನೀಡಿದ್ದೇವೆ. ಹೆಸ್ಕಾಂ ಇಲಾಖೆಯ ನಿಷ್ಕಾಳಜಿಯಿಂದ ಅಗ್ನಿ ಅವಘಡಗಳು ಹೆಚ್ಚಾಗುತ್ತಿವೆ. ಕೆಳಮಟ್ಟದಲ್ಲಿ ವಿದ್ಯುತ್ ತಂತಿ ಇರುವುದರಿಂದ ಕಬ್ಬಿನ ಬೆಳೆಗಳಿಗೆ ತಂತಿ ತಗುಲಿ ಅವಘಡಗಳು ಸಂಭವಿಸುತ್ತಿವೆ. ತಾಲೂಕಿನ ರೈತರು ಭಯ ಪಡಬೇಕಾಗಿಲ್ಲ. ಹಾನಿಗೊಳಗಾದ ರೈತರಿಗೆ ಪರಿಹಾರ ಕೊಡಲು ಪ್ರಯತ್ನಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಯಲ್ಲಾರಿ ಶಿಂಧೆ, ಅಣ್ಣಪ್ಪ ಓಲೇಕಾರ, ಕಿರಣ ಪಾಟೀಲಕುಲಕರ್ಣಿ, ರವಿ ಅಲ್ಲಾಪುರ, ಸುರೇಶ ಶೀಲವಂತರ, ಶ್ರೀಕಾಂತ್ ಪಾಟೀಲ್, ಸಂತೋಷ ಮಾದನಭಾವಿ, ಶ್ರೀಧರ ದ್ಯಾವಪ್ಪನವರ, ಸದಾನಂದ ಚಿಂತಾಮಣಿ, ಆನಂದ ಕಡಲಾಸ್ಕರ್, ಬಸವರಾಜ ಹೊನ್ನಿಹಳ್ಳಿ, ಪುಂಡಲೀಕ ಜಾಧವ, ಅಶೋಕ ಆಡಿನವರ, ವಿನಾಯಕ ಗೌಳಿ, ರಾಘವೇಂದ್ರ ಹುಲಿಹೊಂಡ, ಚನ್ನಬಸಪ್ಪ ಶ್ರೀಗಟ್ಟಿ, ಬಸವರಾಜ ಅಗಡಿ, ಡಾ.ಬಿ.ಎಂ. ಹಿರೇಮಠ, ಬೀರಪ್ಪ ಡೊಳ್ಳಿನ, ವಿ.ಎಸ್. ಬೆಣ್ಣಿ, ವಿಠ್ಠಲ್ ಸೂರ್ಯವಂಶಿ, ಅಭಿಷೇಕ ಮೊರಬದ, ವೀರಭದ್ರಪ್ಪ ಮನಗುಂಡಿ, ಶಿವಾನಂದ ಮಾದಿ, ನಿಂಗಪ್ಪ ಸುಳ್ಳದ, ರಮೇಶ ರೊಟ್ಟಿ ಇತರರಿದ್ದರು.