ವಿನಯ ಕುಲಕರ್ಣಿ 
ಧಾರವಾಡ

ವಿನಯ ಕುಲಕರ್ಣಿ ಧಾರವಾಡ ದಾರಿ ಸುಗಮ

ಶಾಸಕ ವಿನಯ ಕುಲಕರ್ಣಿ ಅವರಿಗೆ ಜಿಲ್ಲಾ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ತೆರವುಗೊಳಿಸಿದೆ. ಆದಾಗ್ಯೂ ಜಿಲ್ಲೆಗೆ ಪ್ರವೇಶಿಸುವ ಸಂದರ್ಭದಲ್ಲಿ ಸ್ವಾಗತ ಮೆರವಣಿಗೆ, ರ್ಯಾಲಿ, ಸಂಭ್ರಮಾಚರಣೆ ಅಥವಾ ಸಾರ್ವಜನಿಕ ಸಭೆ ಆಯೋಜಿಸುವಂತಿಲ್ಲ. ಸಾರ್ವಜನಿಕ ಶಾಂತಿ ಕದಡುವ, ಸಂಚಾರ ಅಥವಾ ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ನ್ಯಾಯಾಲಯವು ನನ್ನ ಮೇಲಿದ್ದ ಜಿಲ್ಲಾ ಪ್ರವೇಶ ನಿರ್ಬಂಧ ಷರತ್ತನ್ನು ತೆರವುಗೊಳಿಸಿ ಶಾಸಕ ಸ್ಥಾನದ ಕರ್ತವ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಿರುವ ತೀರ್ಪನ್ನು ಶಾಸಕ ವಿನಯ ಕುಲಕರ್ಣಿ ಸ್ವಾಗತಿಸಿದ್ದಾರೆ. ಸ್ವಾಗತ ಸಮಾರಂಭ, ಮೆರವಣಿಗೆ, ಬಹಿರಂಗ ಸಭೆ ಅಥವಾ ಜನಸಂದಣಿಯನ್ನು ಆಯೋಜಿಸಬಾರದು ಎಂದು ಮನವಿ ಮಾಡಿದ್ದಾರೆ.