ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ vikasita bharat ವಿಕಸಿತ ಭಾರತ ಸಂಕಲ್ಪ ಸಮಾವೇಶವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.
ಹುಬ್ಬಳ್ಳಿ: ಈ ಮೊದಲು ಭಾರತದಲ್ಲಿ ಆಳ್ವಿಕೆ ನಡೆಸಿದವರು vikasita bharat ಕಾಂಗ್ರೆಸ್ ಇಲ್ಲದೆ ಅಧಿಕಾರವಿಲ್ಲವೆಂಬಂತೆ ಇದ್ದರು. ಅಭಿವೃದ್ಧಿ ದೃಷ್ಟಿಕೋನವಿರದ ಚುನಾವಣೆಗಳು ಆಗ ನಡೆದವು. ಈಗ ಭಾರತವು ಅಭಿವೃದ್ಧಿಯ ದ್ಯೋತಕವಾಗಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನರು ತಮ್ಮ ನಾಯಕರೆಂದು ಒಪ್ಪಿಕೊಂಡಿರುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗುಣಗಾನ ಮಾಡಿದರು.
ವಿಶ್ವಾಸ, ವಿಕಾಸ ಮತ್ತು ಜನಕಲ್ಯಾಣಕ್ಕೆ 12 ವರ್ಷ ನಿಮಿತ್ತ ಬಿಜೆಪಿಯಿಂದ ನಗರದ ಕೆಎಲ್‌ಇ ಬಯೋಟೆಕ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ವಿಕಸಿತ ಭಾರತ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಕ್ಸಲ್ ಹಾಗೂ ಭಯೋತ್ಪಾದನೆ ಮುಕ್ತ ಭಾರತವಾಗಿದೆ. 370ನೇ ವಿಧಿ ರದ್ದುಪಡಿಸುವುದರ ಮೂಲಕ ನಾವು ಸಮರ್ಥರು ಎನ್ನುವುದನ್ನು ತೋರಿಸಿಕೊಟ್ಟಿದ್ದೇವೆ. ಭಾಹ್ಯ ದೇಶದ ಮೇಲಿನ ಇತರ ಉತ್ಪನಗಳನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿದ್ದೇವೆ. ಶೇ.11ರಷ್ಟು ರಫ್ತು ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು. 2047ಕ್ಕೆ ಭಾರತವು ವಿಶ್ವದಲ್ಲಿಯೇ ನಂ. 1 ಆಗಬೇಕೆಂಬುದನ್ನು ನರೇಂದ್ರ ಮೋದಿ ಅವರು ಸಂಕಲ್ಪ ತೊಟ್ಟಿದ್ದಾರೆ. ಇದಕ್ಕೆ ನಾವೆಲ್ಲರೂ ಸಾಥ್ ಕೊಡಬೇಕು ಎಂದು ವಿನಂತಿಸಿದರು.
ಸಂವಿಧಾನ ಹೆಸರೇಳಿಕೊಂಡು ಕೈಯಲ್ಲಿ ಸಂವಿಧಾನ ಪುಸ್ತಕ ಇಟ್ಟುಕೊಂಡಿದ್ದಾರೋ ಇಲ್ಲವೋ ಖಾಲಿ ಪುಸ್ತಕವೋ ಗೊತ್ತಿಲ್ಲ. ಸಂವಿಧಾನ ಬದ್ಧ ಪ್ರಜಾಪ್ರಭುತ್ವ ನಡೆಯುತ್ತಿರುವುದು ಈಗ. ಜವಾಹರಲಾಲ್ ನಂತರ ಬಂದಿದ್ದು ಬರೀ ಅಸ್ಥಿರತೆ ಸರ್ಕಾರಗಳು. ಅಟಲ್‌ಬಿಹಾರಿ ವಾಜಪೇಯಿ ಅವರು ಕಾಂಗ್ರೆಸ್ ಅಸ್ತಿತ್ವ ಕಳೆದರು. ಈಗ ಸ್ಥಿರ ಸರ್ಕಾರವನ್ನು ಜನರು ಬಯಸಿದಂತೆ ಬಂದಿದೆ. ಹಾಗಾಗಿಯೇ ಅಭಿವೃದ್ಧಿಯ ಪರ್ವ ಶುರುವಾಗಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 12 ವರ್ಷ ಆಗಿದೆ. ಈ ವೇಳೆ ಮಹತ್ತರ ಬದಲಾವಣೆಗಳನ್ನು ದೇಶ ಕಂಡಿದೆ. ಮಧ್ಯ ಪ್ರಾಚ್ಯ, ರಷ್ಯಾ-ಉಕ್ರೇನ್ ಯುದ್ಧ ನಡೆದರೂ ನಮಗೆ ಸಮಸ್ಯೆ ಆಗದಂತೆ ನೋಡಿಕೊಂಡರು. ಜಿ 7 ರಾಷ್ಟ್ರಗಳ ಸಮಾವೇಶದಲ್ಲೂ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಎಲ್ಲ ರಂಗದಲ್ಲಿಯೂ ಭಾರತವು ತನ್ನ ಛಾಪು ಮೂಡಿರುವುದಕ್ಕೆ ನರೇಂದ್ರ ಮೋದಿ ಅವರು ಕಾರಣ ಎಂದರು.
ಮಹಾನಗರ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ರಾಜ್ಯಸಭಾ ಸದಸ್ಯ ಮಾ. ನಾಗರಾಜ, ಎಂಎಲ್‌ಸಿಗಳಾದ ಪ್ರದೀಪ ಶೆಟ್ಟರ್, ಪ್ರೊ.ಎಸ್.ವಿ. ಸಂಕನೂರ, ಲಿಂಗರಾಜ ಪಾಟೀಲ, ಕೆಎಲ್‌ಇ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪ್ರಮುಖರಾದ ನಿಂಗಪ್ಪ ಸುತಗಟ್ಟಿ, ಮಹೇಂದ್ರ ಕೌತಾಳ, ಸಂಜಯ ಕಪಟಕರ, ಜಯತೀರ್ಥ ಕಟ್ಟಿ ಇತರರಿದ್ದರು.