(vijayotsav) ಹುಬ್ಬಳ್ಳಿಯ ವಿಜಯವಾಣಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ವಿಜಯೋತ್ಸವ ಶಾಪಿಂಗ್​ ಹಬ್ಬದ ಸಂಭ್ರಮ ಲಕ್ಕಿ ಡ್ರಾ ಸಮಾರಂಭದಲ್ಲಿ ಶ್ರೀಜೈನ್​ ರಾಜಸ್ಥಾನಿ ವಿದ್ಯಾಪ್ರಚಾರಕ ಮಂಡಳ (ಎಸ್​ಜೆಆರ್​ವಿಪಿ) ಚೇರ್ಮನ್​ ಭವರಲಾಲ್​ ಸಿ. ಜೈನ್​, ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಹಾಗೂ ಗ್ಲೋಬಲ್​ ಮೀಡಿಯಾದ ದಿನೇಶ ಶೆಟ್ಟಿ ಅವರು ಕೂಪನ್​ ಎತ್ತಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದರು. 
ಧಾರವಾಡ

(vijayotsav) ವಿಜಯೋತ್ಸವ ಅದೃಷ್ಟಶಾಲಿಗಳ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ವಿಆರ್​ಎಲ್​ ಸಾಮಾಜಿಕ ಕಾರ್ಯಗಳಿಗೆ ಜನಮನ್ನಣೆ
  • ಉದ್ಯಮಿ ಭವರಲಾಲ್​ ಸಿ. ಜೈನ್​ ಬಣ್ಣನೆ
  • ಶಾಪಿಂಗ್​ ಹಬ್ಬದ ಸಂಭ್ರಮ
ಹುಬ್ಬಳ್ಳಿ: (vijayotsav) ವಿಆರ್​ಎಲ್​ ಸಮೂಹ ಸಂಸ್ಥೆಯು ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದ್ದು, ಇದಕ್ಕೆ ಸಂಸ್ಥೆಯ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರ ದೂರದೃಷ್ಟಿಯೇ ಕಾರಣ ಎಂದು ಶ್ರೀ ಜೈನ್​ ರಾಜಸ್ಥಾನಿ ವಿದ್ಯಾಪ್ರಚಾರಕ ಮಂಡಳದ (ಎಸ್​ಜೆಆರ್​ವಿಪಿ) ಚೇರ್ಮನ್​ ಭವರಲಾಲ್​ ಸಿ. ಜೈನ್​ ಅಭಿಪ್ರಾಯಪಟ್ಟರು.
ಇಲ್ಲಿಯ ನ್ಯೂ ಕಾಟನ್​ ಮಾರ್ಕೆಟ್​ ವಿಜಯವಾಣಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ವಿಜಯೋತ್ಸವ ಶಾಪಿಂಗ್​ ಹಬ್ಬದ ಸಂಭ್ರಮ ಅದೃಷ್ಟಶಾಲಿ ವಿಜೇತರ ಆಯ್ಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿಆರ್​ಎಲ್​ ರಚನಾತ್ಮಕವಾಗಿ ಕೆಲಸ ಮಾಡಿ ದೇಶದಲ್ಲಿಯೇ ನಂಬರ್​ ಒನ್​ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕೇವಲ ಲಾಭವನ್ನು ನೋಡದೆ, ಸಾರ್ವಜನಿಕ ಹಿತ ಗಮನದಲ್ಲಿಟ್ಟುಕೊಂಡು ಮಾಡುವ ಪ್ರತಿ ಕೆಲಸವೂ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿವೆ ಎಂದು ಹೇಳಿದರು.
ವಿಜಯವಾಣಿ ದಿನಪತ್ರಿಕೆ ಓದುಗರ ಮನಗೆದ್ದು ಕೇವಲ ಒಂದೇ ವರ್ಷದಲ್ಲಿ ರಾಜ್ಯದ ನಂಬರ್​ ಒನ್​ ಪತ್ರಿಕೆಯಾಗಿ ಹೊರಹೊಮ್ಮಿತು. ಈಗಲೂ ಆ ಸ್ಥಾನ ಉಳಿಸಿಕೊಂಡಿದೆ. ವಿಜಯವಾಣಿ ಮುಖಾಂತರ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಸರಾ ದೀಪಾವಳಿಗೆ ವಸ್ತುಗಳನ್ನು ಖರೀದಿಸಿದವರಿಗೆ ವಿಜಯೋತ್ಸವದ ಮುಖೇನ ಕಾರು, ಬೈಕ್​, ಚಿನ್ನ, ಟಿವಿ, ವಾಷಿಂಗ್​ ಮಶಿನ್​ದಂತಹ ವಿಶೇಷ ಬಹುಮಾನಗಳನ್ನು ನೀಡಲಾಗುತ್ತಿದೆ. ಅಂತಹ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡುವ ಯೋಗ ನನ್ನ ಪಾಲಿಗೆ ಬಂದಿರುವುದು ಸುದೈವವೇ ಸರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು, ವಿಜಯವಾಣಿ ವತಿಯಿಂದ ಕಳೆದ 12 ವರ್ಷದಿಂದ ರಾಜ್ಯದ ಎಲ್ಲ ಆವೃತ್ತಿಗಳಲ್ಲಿ ವಿಜಯೋತ್ಸವ ಶಾಪಿಂಗ್​ ಸಂಭ್ರಮ ಮಾಡಲಾಗುತ್ತಿದೆ. 6 ಲಕ್ಷಕ್ಕೂ ಹೆಚ್ಚು ಗ್ರಾಹಕರು ಪಾಲುದಾರ ಮಳಿಗೆಯಲ್ಲಿ ವಸ್ತುಗಳನ್ನು ಖರೀದಿ ಮಾಡಿ ಇದರಲ್ಲಿ ಭಾಗಿಯಾಗಿದ್ದಾರೆ. ಪಾರದರ್ಶಕವಾಗಿ ಆಯ್ಕೆ ಮಾಡುವ ಮೂಲಕ ಗ್ರಾಹಕರ ವಿಶ್ವಾಸ ಉಳಿಸಿಕೊಂಡು ಬರಲಾಗಿದೆ. ಪ್ರತಿ ವರ್ಷ 2500 ಬಹುಮಾನ ನೀಡಲಾಗುತ್ತದೆ. ಈ ವರೆಗೆ 31 ಸಾವಿರಕ್ಕೂ ಹೆಚ್ಚು ಬಹುಮಾನ ನೀಡಲಾಗಿದೆ ಎಂದರು.