ವಿದ್ಯಾರಂಭ ಕಾರ್ಯಕ್ರಮ  
ಧಾರವಾಡ

ಸತ್ತೂರ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ಅಕ್ಷರಾಭ್ಯಾಸ

ಧಾರವಾಡ: ನಗರದ ಸತ್ತೂರ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಹಾಗೂ ವಿದ್ಯಾರಂಭ ಕಾರ್ಯಕ್ರಮ ಜರುಗಿತು.
ಹುಬ್ಬಳ್ಳಿಯ ಚಿನ್ಮಯ ಮಿಷನ್​ನ ಶ್ರೀ ಕೃತಾತ್ಮಾನಂದ ಸ್ವಾಮೀಜಿ ನರ್ಸರಿ ಹಾಗೂ ಎಲ್​ಕೆಜಿ ವಿದ್ಯಾರ್ಥಿಗಳಿಗೆ ಅಕ್ಕಿಯಲ್ಲಿ "ಓಂ' ಬರೆಯುವ ಮೂಲಕ ವಿದ್ಯಾಭ್ಯಾಸಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಮಕ್ಕಳು ಸಮಾಜದಿಂದ ಕೆಟ್ಟ ಅಭ್ಯಾಸಗಳನ್ನು ಸುಲಭವಾಗಿ ಕಲಿಯುವ ಸಾಧ್ಯತೆ ಇದೆ. ಆದ್ದರಿಂದ ಪೋಷಕರು ಮತ್ತು ಶಿಕ್ಷಕರು ಒಳ್ಳೆಯ ಮೌಲ್ಯಗಳು ಹಾಗೂ ಸಂಸ್ಕಾರಗಳನ್ನು ಬೆಳೆಸುವ ಜವಾಬ್ದಾರಿ ಹೊರಬೇಕು ಎಂದರು.
ಇದಕ್ಕೂ ಮೊದಲು 9ನೇ ತರಗತಿಯ ವಿದ್ಯಾಥಿರ್ನಿಯರು ಸಂಪ್ರದಾಯಬದ್ಧವಾಗಿ ಕುಂಭ ಸ್ವಾಗತ ನೀಡಿ ಶ್ರೀಗಳನ್ನು ಬರಮಾಡಿಕೊಂಡರು.
ಪ್ರಧಾನಾಚಾರ್ಯ ರಾಮಕೃಷ್ಣ ಸ್ವಾಗತಿಸಿದರು. ಶಾಲಾ ಕರೆಸ್ಪಾಂಡೆಂಟ್​ ಗುರುರಾಜ ಅಗಡಿ ಸಂಸ್ಥೆಯ ಶಿಕ್ಷಣ, ಸೇವಾ ಚಟುವಟಿಕೆಗಳು ಹಾಗೂ ಸಮಗ್ರ ಶಿಕ್ಷಣ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಉಪ ಪ್ರಧಾನಾಚಾಯೆರ್ ಸುಕನ್ಯಾ, ಗರಗ ರಾಷ್ಟ್ರೋತ್ಥಾನ ಶಾಲೆಯ ಪ್ರಾಚಾಯೆರ್ ಡಾ. ಅನಿತಾ ರೈ, ಮಾರ್ಗದರ್ಶಕರಾದ ವಿನಾಯಕ ಭಟ್​, ರಂಗನಾಥ ಕುಲಕಣಿರ್, ರಾಘವೇಂದ್ರ ಪಾಟೀಲ್​, ಪೋಷಕರು, ಶಿಕ್ಷಕರು ಹಾಗೂ ಸಿಬ್ಬಂದಿಯವರು ಇದ್ದರು.