ಪ್ರದಿಪ ಹುಬ್ಬಳ್ಳಿ 
ಧಾರವಾಡ

ವಿದ್ಯಾನಿಧಿ ವಸತಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ

ಧಾರವಾಡ: ಇಲ್ಲಿನ ಹಳಿಯಾಳ ರಸ್ತೆಯಲ್ಲಿ ಬಸವನಗರದ ವಿದ್ಯಾನಿಧಿ ಆಂಗ್ಲ ಮಾಧ್ಯಮ ವಸತಿ ಪ್ರೌಢಶಾಲೆಯ ಎಸ್​ಎಸ್​ಎಲ್​ಸಿ ಲಿತಾಂಶವು ಶೇ. 100 ಆಗಿದೆ. 26 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 66 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ವಿದ್ಯಾರ್ಥಿಗಳಾದ ಪ್ರದಿಪ ಹುಬ್ಬಳ್ಳಿ ಶೇ. 99 ಶಾಲೆಗೆ ಪ್ರಥಮ, ಅಕುಲ ಪಾಟೀಲ ಶೇ. 98 ದ್ವೀತಿಯ, ತನಾಜ ನವಲೂರ ಶೇ. 97 ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ. ಯಲಗುರೇಶ ಹಲವಾರ ಶೇ. 96, ಕಾತಿರ್ಕ ಅಕ್ಕಿಮರಡಿ ಶೇ. 94, ಸುಶಾಂತ ಪಾಟೀಲ ಶೇ. 94, ಸೃಷ್ಟಿ ಬಂಡಿವಡ್ಡರ ಶೇ. 92, ಪ್ರೀತಮ್​ ಕನಕೇರಿ ಶೇ. 92, ಸಂಗಮೇಶ ಕನಗಲ್​ ಶೇ. 91, ಮನೋಜ ಕೊಡ್ಲಿ ಶೇ. 91, ಸಾಗರ ದೇವರೆಡ್ಡಿ ಶೇ. 90, ವಿಜಯಲಕ್ಷ್ಮೀ ಬುಡರಕಟ್ಟಿ ಶೇ. 90, ಪ್ರಭು ದಿಡ್ಡಿ ಶೇ. 90, ಸಾಗರ ಸೋಕನಾಡಗಿ ಶೇ. 90 ಅಂಕ ಪಡೆದಿದ್ದಾರೆ.