victory ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಟೈ ವುಮೆನ್ ಗ್ಲೋಬಲ್ ಪಿಚ್ ಕಾಂಪಿಟೇಶನ್ 2026 ಪ್ರಾದೇಶಿಕ ಅಂತಿಮ ಸ್ಪರ್ಧೆಯಲ್ಲಿ ವಿಜೇತ ಡಾ. ವರ್ಷಾ ಜಾಧವ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 
ಧಾರವಾಡ

ವುಮೆನ್ ಗ್ಲೋಬಲ್ ಪಿಚ್ ಕಾಂಪಿಟೇಶನ್ ಸ್ಪರ್ಧೆಯಲ್ಲಿ ಗೆಲವು victory

ಪ್ರಮುಖ ಮುಖ್ಯಾಂಶಗಳು

  • ಡಾ. ವರ್ಷಾ ಶಿವಾಜಿ ಜಾಧವ ವಿಜೇತರಾಗಿದ್ದಾರೆ.
  • ಸೌಲ್ಸರಾ ಪ್ರೖೆ.ಲಿ.ನ ಸಹ ಸಂಸ್ಥಾಪಕಿ ದೀಕ್ಷಾ ಶುಲ್ಕಾ ಪ್ರಥಮ ರನ್ನರ್ ಅಪ್
  • , ತ್ರಿವಿಧಿ ಲ್ಯಾಬ್ಸ್ ಪ್ರೖೆ. ಲಿ. ನ ಸಂಸ್ಥಾಪಕಿ ಡಾ. ಚಿತ್ರಾ ಜವಳಿ ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದುಕೊಂಡರು.

ಸೌಲ್ಸರಾ ಪ್ರೖೆ.ಲಿ.ನ ಸಹ ಸಂಸ್ಥಾಪಕಿ ದೀಕ್ಷಾ ಶುಲ್ಕಾ ಪ್ರಥಮ ರನ್ನರ್ ಅಪ್, ತ್ರಿವಿಧಿ ಲ್ಯಾಬ್ಸ್ ಪ್ರೖೆ. ಲಿ. ನ ಸಂಸ್ಥಾಪಕಿ ಡಾ. ಚಿತ್ರಾ ಜವಳಿ ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದುಕೊಂಡರು.

ಅಂತಿಮ ಹಂತಕ್ಕೆ ಆಯ್ಕೆಯಾದ ಈ ಮೂವರೂ ಮಹಿಳಾ ಉದ್ಯಮಿಗಳು ಪ್ರಮುಖ ಸವಾಲುಗಳಿಗೆ ಪರಿಹಾರ ಒದಗಿಸುವ ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಪ್ರಸ್ತುತಪಡಿಸಿದರು.

ಸ್ಪರ್ಧಿಗಳು ತಮ್ಮ ಉದ್ಯಮಗಳನ್ನು ತೀರ್ಪಗಾರರ ಸಮಿತಿ ಎದುರು ಪ್ರಸ್ತುತಪಡಿಸಿದರು.

ನಾವೀನ್ಯತೆ, ಮಾರುಕಟ್ಟೆ ಅವಕಾಶ, ವಿಸ್ತರಣಾ ಸಾಮರ್ಥ್ಯ, ವ್ಯವಹಾರದ ಕಾರ್ಯಸಾಧ್ಯತೆ, ಸಾಮಾಜಿಕ ಪ್ರಭಾವ ಮತ್ತು ಅನುಷ್ಠಾನ ಸಾಮರ್ಥ್ಯದ ಆಧಾರದ ಮೇಲೆ ಈ ಉದ್ಯಮಿಗಳನ್ನು ಮೌಲ್ಯಮಾಪನ ಮಾಡಲಾಯಿತು.

ಮಾರ್ಗದರ್ಶನ, ಹೂಡಿಕೆ ಮತ್ತು ಜಾಗತಿಕ ಉದ್ಯಮಶೀಲತಾ ಜಾಲಗಳ ಮೂಲಕ ಉತ್ತರ ಕರ್ನಾಟಕದ ಮಹಿಳಾ ಉದ್ಯಮಿಗಳಿಗೆ ಅವಕಾಶಗಳನ್ನು ಸೃಷ್ಟಿಸಲು ತಮ್ಮ ಸಂಸ್ಥೆ ಬದ್ಧವಾಗಿದೆ ಎಂದು ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ ಮಾನೆ ಹೇಳಿದ್ದಾರೆ.

ಟೈ ವುಮೆನ್ ಸಂಚಾಲಕಿ ಡಾ. ನಮ್ರತಾ ಪಿ. ಹೆಗಡೆ ಮಾತನಾಡಿ, ಈ ಸ್ಪರ್ಧೆಯು ಮಹಿಳಾ ಸಂಸ್ಥಾಪಕರಿಗೆ ತಮ್ಮ ಆಲೋಚನೆಗಳನ್ನು ಪರಿಷ್ಕರಿಸಲು ಮತ್ತು ವಿಶಾಲವಾದ ಉದ್ಯಮಶೀಲತಾ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಒದಗಿಸಿತು ಎಂದು ತಿಳಿಸಿದರು.

ಡಾ. ವರ್ಷಾ ಜಾಧವ ಅವರು ಟೈ ವುಮೆನ್ ಗ್ಲೋಬಲ್ ಪಿಚ್ ಸ್ಪರ್ಧೆ-2026ರ ಮುಂದಿನ ಹಂತಕ್ಕೆ ಅರ್ಹತೆ ಗಳಿಸಿದ್ದಾರೆ.