(vhp) ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹುಬ್ಬಳ್ಳಿ ಮಹಾನಗರ ವತಿಯಿಂದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ಧಾರವಾಡದಲ್ಲಿ ಶನಿವಾರ ಮನವಿ ಸಲ್ಲಿಸಲಾಯಿತು. 
ಧಾರವಾಡ

ಲವ್ ಜಿಹಾದ್, ಡ್ರಗ್ಸ್ ದಂಧೆ ನಿಯಂತ್ರಿಸಲು ವಿಎಚ್‌ಪಿ ಮನವಿ

ಹುಬ್ಬಳ್ಳಿ: ಹು-ಧಾ ಅವಳಿ ನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಲವ್ ಜಿಹಾದ್, ಡ್ರಗ್ಸ್ ದಂಧೆ ನಿಯಂತ್ರಿಸಬೇಕು. ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ ಗೋಹತ್ಯೆ ನಿಷೇಧಿಸಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ (vhp) ಹುಬ್ಬಳ್ಳಿ ಮಹಾನಗರ ವತಿಯಿಂದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ಧಾರವಾಡದಲ್ಲಿ ಶನಿವಾರ ಮನವಿ ಸಲ್ಲಿಸಲಾಯಿತು.
ಹಿಂದೂ ಅಮಾಯಕ ಹುಡುಗಿಯರನ್ನು ಲವ್‌ಜಿಹಾದ್ ಬಲೆಗೆ ಬೀಳಿಸಲಾಗುತ್ತಿದೆ. ನಂತರ ಮತಾಂತರಗೊಳಿಸಿ ಜೀವಕ್ಕೆ ಕುತ್ತು ತರಲಾಗುತ್ತಿದೆ. ಮಹಾನಗರದಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ಮಿತಿ ಮೀರಿದೆ. ಕಾಲೇಜ್ ವಿದ್ಯಾರ್ಥಿಗಳನ್ನೆ ಟಾರ್ಗೆಟ್ ಮಾಡಲಾಗುತ್ತಿದೆ. ಡ್ರಗ್ಸ್ ಪೆಡಲರ್ಸ್‌ಗಳ ಹಾವಳಿ ಹೆಚ್ಚಾಗಿದೆ. ಇಂಥವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕಳ್ಳ ಗೋ ಸಾಗಣೆ ಹೆಚ್ಚಾಗಿದೆ. ಸಾಗಣೆ ಮತ್ತು ಹತ್ಯೆ ಮಾರಾಟ ಮಾಡುವವರು ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಗೋ ಮಾತೆಯನ್ನು ಸಂರಕ್ಷಿಸಬೇಕು. ಲವ್ ಜಿಹಾದ್ ಕೇಸ್ ತಡೆಯಲು ಹೋದ 62 ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೂಡಲೇ ಕೇಸ್ ಹಿಂಪಡೆಯಬೇಕು ಎಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಲಾಯಿತು.
ವಿಎಚ್‌ಪಿ ಮಹಾನಗರ ಜಿಲ್ಲೆ ಕಾರ್ಯದರ್ಶಿ ಚೇತನರಾವ್, ಗೋವರ್ಧನರಾವ್, ಬಜರಂಗದಳದ ರಾಜ್ಯ ಸಹ ಕಾರ್ಯದರ್ಶಿ ಶಿವಾನಂದ ಸತ್ತಿಗೇರಿ ಇತರರು ಇದ್ದರು.