vascular treatment ಹುಬ್ಬಳ್ಳಿಯಲ್ಲಿ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯಲ್ಲಿ ಡಾ. ವೆಂಟಕಟೇಶ ಎಚ್.ಎ. ಮಾತನಾಡಿದರು.
ಹುಬ್ಬಳ್ಳಿ: ಇಲ್ಲಿಯ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯಲ್ಲಿ vascular treatment ಮೇಲ್ಹಂತದ ಲಿವರ್ ಕಾಯಿಲೆ ರೋಗಿಗೆ ಅಪರೂಪದ ‘ಜೀವ ರಕ್ಷಕ ವ್ಯಾಸ್ಕುಲರ್’ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವ್ಯಾಸ್ಕುಲರ್ ಮತ್ತು ಇಂಟರ್‌ವೆನ್ಷನಲ್ ರೇಡಿಯಾಲಜಿಸ್ಟ್ ಕನ್ಸಲ್ಟೆಂಟ್ ಡಾ. ವೆಂಕಟೇಶ ಎಚ್.ಎ., 2 ತಿಂಗಳ ಹಿಂದೆ 50 ವರ್ಷದ ವ್ಯಕ್ತಿಯೊಬ್ಬರು, ಪದೇ ಪದೆ ರಕ್ತ ಸಹಿತ ವಾಂತಿಯಾಗುತ್ತಿದ್ದರಿಂದ ನಮ್ಮ ಬಳಿ ಚಿಕಿತ್ಸೆಗೆ ಆಗಮಿಸಿದ್ದರು. ಆತನಿಗೆ ನಾಲ್ಕನೇ ಹಂತದ ಲಿವರ್ ಸಿರೋಸಿಸ್, ಪೋರ್ಟಲ್ ವೇನ್ ಥ್ರಂಬೋಸಿಸ್, ಗ್ಯಾಸ್ಟ್ರೋಇಂಟರ್‌ವೆನ್ಷನಲ್ ರಕ್ತಸ್ರಾವದಿಂದ ಬಳಲುತ್ತಿರುವುದು ಗೊತ್ತಾಯಿತು ಎಂದರು.
ತಪಾಸಣೆ ನಡೆಸಿದ ಬಳಿಕ ಮಲ್ಟಿ ಡಿಸಿಪ್ಲಿನರಿ ವೈದ್ಯರ ತಂಡ, ಚಿಕಿತ್ಸೆ ನಡೆಸಲು ತೀರ್ಮಾನಿಸಿತು. ಅತ್ಯಾಧುನಿಕ ಮಿನಿಮಲಿ ಇನ್ವೇಸಿವ್ ವ್ಯಾಸ್ಕುಲರ್ ಪ್ರೊಸೀಜರ್ ಮೂಲಕ ಯಶಸ್ವಿ ಚಿಕಿತ್ಸೆ ನಡೆಸಿತು. ಈ ಚಿಕಿತ್ಸೆಯಿಂದ ಪದೇ ಪದೆ ಆಗುತ್ತಿದ್ದ ರಕ್ತಸ್ರಾವ ನಿಯಂತ್ರಿಸುವುದರ ಜತೆಗೆ ಲಿವರ್‌ಗೆ ಆಗುವ ರಕ್ತ ಪರಿಚಲನೆಯನ್ನು ಸಹಜ ಸ್ಥಿತಿಗೆ ತರಲು ನೆರವಾಗಿದೆ. ಈ ಮೂಲಕ ರೋಗಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದರು.
ಗ್ಯಾಸ್ಟ್ರೋಎಂಟ್ರಲಾಜಿಸ್ಟ್ ಕನ್ಸಲ್ಟೆಂಟ್ ಡಾ. ಸಂಜೀವ ಚಟ್ನಿ ಮಾತನಾಡಿ, ಸಂಕೀರ್ಣ ಲಿವರ್ ಕಾಯಿಲೆಗಳ ಯಶಸ್ವಿ ನಿರ್ವಹಣೆಯಲ್ಲಿ ಬಹು ಶಿಸ್ತ್ರೀಯ ಚಿಕಿತ್ಸಾ ವಿಧಾನ ಅತ್ಯಗತ್ಯ. ಇದನ್ನು ಮನಗಂಡು ನಮ್ಮ ವೈದ್ಯರ ತಂಡ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ. ಇದು ಬರೀ ಜೀವ ರಕ್ಷಕ ಚಿಕಿತ್ಸೆ ಮಾತ್ರ, ನಂತರ ಲಿವರ್ ಕಸಿಯಂಥ ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವೂ ಬೀಳಬಹುದು ಎಂದರು.
ಡಾ. ಸಂದೀಪ ಕುಂಬಾರ, ಆಸ್ಪತ್ರೆಯ ಚೀಫ್ ಆಪರೇಟಿಂಗ್ ಆಫೀಸರ್ ಎಚ್.ಡಿ. ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.