vasanta horatti ವಸಂತ ಹೊರಟ್ಟಿ ಜನ್ಮ ದಿನ ನಿಮಿತ್ತ ಹುಬ್ಬಳ್ಳಿಯ ಆಕ್ಸ್‌ಫರ್ಡ್ ಕಾಲೇಜ್‌ನಲ್ಲಿ ಶನಿವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಹುಬ್ಬಳ್ಳಿ: ಇಲ್ಲಿಯ ಕುಸುಗಲ್ ರಸ್ತೆಯಲ್ಲಿರುವ ವಿಶ್ವಶಾಂತಿ ಫೌಂಡೇಷನ್‌ನ ಆಕ್ಸ್‌ಫರ್ಡ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ವಸಂತ ಹೊರಟ್ಟಿ vasanta horatti ಜನ್ಮ ದಿನ ನಿಮಿತ್ತ ಆರೋಗ್ಯ ಸಂಕಲ್ಪ -2026 ಬೃಹತ್ ಆರೋಗ್ಯ ಶಿಬಿರ ಶನಿವಾರ ಏರ್ಪಡಿಸಲಾಗಿತ್ತು.
ತಜ್ಞ ವೈದ್ಯರ ತಂಡ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಇದೇ ವೇಳೆ ಹಲವರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾದರಿಯಾದರು. ವಸಂತ ಹೊರಟ್ಟಿ ಅವರಿಗೆ ಇದೇ ವೇಳೆ ಶುಭ ಕೋರಲಾಯಿತು.
ಹೇಮಲತಾ ಬಸವರಾಜ ಹೊರಟ್ಟಿ, ಡಾ. ಮಧುಲಿಕಾ ವಸಂತ ಹೊರಟ್ಟಿ, ಆಕ್ಸ್‌ಫರ್ಡ್ ಸಂಸ್ಥೆಯ ನಿರ್ದೇಶಕರಾದ ಸಂತೋಷ ಮುತ್ತಗಿ, ಗೌತಮ ಜೈನ್, ಸಂಜಯ ಅಳಗುಂಡಗಿ, ಸಾಮಾಜಿಕ ಕಾರ್ಯಕರ್ತ ಕೃಷ್ಣ ಉರಣಕರ, ಸುಬ್ರಹ್ಮಣ್ಯ ಶಿರಕೋಳ ಇತರರಿದ್ದರು.