upsc ssk ಹುಬ್ಬಳ್ಳಿಯ ಖೋಡೆ ಹಾಸ್ಟೇಲ್ನಲ್ಲಿ ಏರ್ಪಡಿಸಿದ್ದ ವಿಶೇಷ ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೊಂದಿಗೆ ಶ್ರೀನಿವಾಸ ಖೋಡೆ, ಕೇಶವರಾವ್ ಜಾದವ್, ಉಮಾ, ನರೇಂದ್ರ ಮಿಸ್ಕಿನ್, ಮೋಹನರಾಜ್ ಇಲ್ಲೂರ ಇತರರು.
ಹುಬ್ಬಳ್ಳಿ: upsc ssk ವಿದ್ಯಾನಗರದ ಎಬಿಎಸ್ಎಸ್ಕೆ ವಿದ್ಯಾವರ್ಧಕ ಸಂಘದ ಲಕ್ಷ್ಮಣಸಾ ಖೋಡೆ ಹಾಸ್ಟೇಲ್ನಲ್ಲಿ ಖೋಡೆ ಫೌಂಡೇಷನ್ ಮತ್ತು ವಾಸವಿ ಅಕಾಡೆಮಿ ಸಹಯೋಗದಲ್ಲಿ ಎಸ್ಎಸ್ಕೆ ಸಮಾಜದ ಯುವ ಪದವೀಧರರಿಗಾಗಿ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಯುಪಿಎಸ್ಸಿ ಪರೀೆ ಸಿದ್ಧತೆ ಕುರಿತು ತರಬೇತಿ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಶ್ರೀನಿವಾಸ ಖೋಡೆ ಮಾತನಾಡಿ, ಪದವೀಧರ ವಿದ್ಯಾರ್ಥಿಗಳು ದೇಶಸೇವೆಗೆ ಬಲಿಷ್ಠರಾಗಬೇಕು. ಅಗತ್ಯ ಕೌಶಲ ಪಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಕೇಶವರಾವ ಜಾದವ್, ಉಮಾ, ನರೇಂದ್ರ ಮಿಸ್ಕಿನ್, ಮೆರಿಟ್ಯುಡ್ ಸ್ಕಿಲ್ ಡೆವಲಪಮೆಮಟ್ ಲಿಮಿಟೆಡ್ ಮುಖ್ಯಸ್ಥ ಮೋಹನರಾಜ್ ಇಲ್ಲೂರ ಅವರು ಉಪನ್ಯಾಸ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳವಳಿಕೆ ನೀಡಲಾಯಿತು.
ಎಸ್ಎಸ್ಕೆ ಸಮಾಜ ಅಧ್ಯಕ್ಷ ಶಶಿಕುಮಾರ ಮೆಹರವಾಡೆ, ರಾಮಚಂದ್ರ ಕಬಾಡೆ ಇತರರು ಮಾತನಾಡಿದರು.
ಮೀರಾಬಾಯಿ ಮೆಹರವಾಡೆ, ಮೋಹನ ಸೋಳಂಕಿ, ಅಶೋಕ ಹಬೀಬ, ನಾಗೇಂದ್ರಸಾ ಮೆಹರವಾಡೆ, ಶ್ಯಾಮ ಕಬಾಡಿ, ಐ.ಜಿ. ಸುರೇಶ, ಗೋಪಾಲಕೃಷ್ಣ ರಂಗ್ರೇಜ, ರಮೇಶ ಬುರಬುರೆ, ವಿನಾಯಕ ಧೋಂಗಡಿ, ಇತರರು ಇದ್ದರು.