Unkall kargil ಹುಬ್ಬಳ್ಳಿಯ ಉಣಕಲ್ಲ ನಿವೃತ್ತ ಯೋಧರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು. ವೀರಪ್ಪ ಹಸ್ಬಿ, ಶೇಖಪ್ಪ, ಕುಬೇರಪ್ಪ ನರೇಗಲ್, ಪಂಚಾಕ್ಷರಿ ವಸ್ತ್ರದ, ಅಶೋಕ ಶಿವಳ್ಳಿ, ನವೀನ್ ಮಡಿವಾಳರ, ವೆಂಕರೆಡ್ಡಿ ಇತರರು ಉಪಸ್ಥಿತರಿದ್ದರು.
- ಶಾಸಕ ಮಹೇಶ ಟೆಂಗಿನಕಾಯಿ ಶ್ಲಾಘನೆ
- ಉಣಕಲ್ಲನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ
ಹುಬ್ಬಳ್ಳಿ: Unkall kargil ಉಣಕಲ್ನ ನಿವೃತ್ತ ಯೋಧರ ಸಂಘದ ವತಿಯಿಂದ ಭಾನುವಾರ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.
ಅತಿಥಿಯಾಗಿದ್ದ ಶಾಸಕ ಮಹೇಶ ಟೆಂಗಿನಕಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ ಆಚರಿಸಲಾಗುತ್ತದೆ. 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯ ಮತ್ತು ವೀರಯೋಧರ ತ್ಯಾಗವನ್ನು ಸ್ಮರಿಸುವ ದಿನವಾಗಿದೆ. ಪಾಕಿಸ್ತಾನವನ್ನು ಭಾರತದ ಸೈನಿಕರು ಹೆಮ್ಮೆಟಿಸಿ ಕಾರ್ಗಿಲ್ ನಿಂದ ಓಡಿಸಿದರು. ಈ ಸಂದರ್ಭದಲ್ಲಿ ನಮ್ಮ ನೂರಾರು ಸೈನಿಕರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಣೆ ಮಾಡಿದರು ಎಂದು ಹೇಳಿದರು.
ಕೇಂದ್ರದಲ್ಲಿ ಬಲಿಷ್ಠ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವಿದ್ದು, ದೇಶದ ಗಡಿಯಲ್ಲಿ ಲೇಸರ್ ಕಾಂಪೌಂಡ್ ನಿರ್ಮಿಸಿದೆ ಮತ್ತು ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಸೇರಿ ಸಕಲ ಮೂಲ ಸವಲತ್ತುಗಳನ್ನು ನೀಡಿದೆ. ದೇಶದ ಎಲ್ಲ ಪಡೆಗಳಿಗೆ ಮುಕ್ತ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಗಡಿ ವಿಚಾರದಲ್ಲಿ ಭಾರತದ ಸೈನಿಕರು ಅತ್ಯಂತ ಬಲಿಷ್ಠವಾಗಿದ್ದು ಜಗತ್ತಿನ ಮೂರನೇ ಅತಿದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ ಎಂದರು.
ವೀರಪ್ಪ ಹಸ್ಬಿ, ಶೇಖಪ್ಪ ಬಟಕುರ್ಕಿ , ಕುಬೇರಪ್ಪ ನರೇಗಲ್, ಪಂಚಾಕ್ಷರಿ ವಸ್ತ್ರದ, ಅಶೋಕ ಶಿವಳ್ಳಿ, ನವೀನ್ ಮಡಿವಾಳರ, ವೆಂಕರೆಡ್ಡಿ ಇತರರು ಉಪಸ್ಥಿತರಿದ್ದರು.