Selected for Uzabekistna compitaion Wrestler Vikram Chillannavar 
ಧಾರವಾಡ

ಉಜಬೆಕಿಸ್ತಾನಕ್ಕೆ ತೆರಳುತ್ತಿರುವ ಕುಸ್ತಿಪಟು (Wrestler) ವಿಕ್ರಮ

ಪ್ರಮುಖ ಮುಖ್ಯಾಂಶಗಳು

  • ಪುಣೆಯಲ್ಲಿ ಉನ್ನತ ಹಂತದ ತರಬೇತಿ ಪಡೆದಿದ್ದಾನೆ.
  • (Wrestler) ಅನೇಕ ಕುಸ್ತಿಗಳನ್ನು ಗೆದ್ದಿದ್ದಾರೆ.
  • ದ್ವಿತೀಯ ಪಿಯು ಕಾಲೇಜಿನಲ್ಲಿ ಓದುತ್ತಿರುವ ವಿಕ್ರಮ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ವಿಕ್ರಮ ತಂದೆ ಮಂಜುನಾಥ ಚಿಲ್ಲಣ್ಣವರ, ಕಳೆದ ಅ. 23ರಂದು ಬೆಳಗಾವಿಯಲ್ಲಿ ಜರುಗಿದ ಮಿಶನ್ ಓಲಿಂಪಿಕ್ ಆಲ್ ಇಂಡಿಯಾ ರೆಸಲಿಂಗ್ ಸ್ಪರ್ಧೆಯಲ್ಲಿ 61 ಕೆಜಿ ತೂಕದ ವಿಭಾಗದಲ್ಲಿ ವಿಕ್ರಮ ಬೆಳ್ಳಿ ಪದಕ ಪಡೆದಿದ್ದಾಗಿ ತಿಳಿಸಿದರು.
ವಿಕ್ರಮ ಚಿಲ್ಲಣ್ಣವರ ಸತತ ಕುಸ್ತಿ ತರಬೇತಿ ಪಡೆಯುತ್ತಿದ್ದಾರೆ. ಅನೇಕ ಕುಸ್ತಿಗಳನ್ನು ಗೆದ್ದಿದ್ದಾರೆ. ಪುಣೆಯಲ್ಲಿ ಉನ್ನತ ಹಂತದ ತರಬೇತಿ ಪಡೆದಿದ್ದಾನೆ ಎಂದರು.
ಉಣಕಲ್ಲನ ಸರ್ಕಾರಿ ದ್ವಿತೀಯ ಪಿಯು ಕಾಲೇಜಿನಲ್ಲಿ ಓದುತ್ತಿರುವ ವಿಕ್ರಮ, ಅನೇಕ ಜಿಲ್ಲಾ ಮತ್ತು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾನೆ.
ಕೆಲ ಸಂಘಟನೆಗಳು ಹಾಗೂ ದಾನಿಗಳ ಆರ್ಥಿಕ ಸಹಾಯದಿಂದ ಉಜಬೆಕಿಸ್ತಾನದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳುತ್ತಿದ್ದಾನೆ ಎಂದು ಹೇಳಿದರು.