Jatra ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜಣ್ಣ ಕೊರವಿ,
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸದ್ಗುರು ಸಿದ್ಧೇಶ್ವರ ಸ್ವಾಮಿಯವರ ಹೊಸಮಠ ಟ್ರಸ್ಟ್ ಅಧ್ಯಕ್ಷ ರಾಜಣ್ಣ ಕೊರವಿ, 14ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಸಿದ್ಧ್ಧಾರೂಢ ಸ್ವಾಮಿಗಳ ಮಠದಿಂದ ಸಿದ್ಧೇಶ್ವರ ಸ್ವಾಮಿಗಳ ನೂತನ ಶಿಲಾಮಂದಿರದವರೆಗೆ ಶಿಲಾ ಮೂರ್ತಿಗಳ ಅದ್ದೂರಿ ಮೆರವಣಿಗೆ ನಡೆಯಲಿದೆ ಎಂದರು.
ಕರಡಿ ಮಜಲು, ಡೊಳ್ಳು, ಜಗ್ಗಲಗಿ ಸೇರಿ 100 ಜೋಡೆತ್ತುಗಳು ಹಾಗೂ ವಿವಿಧ ಜಾನಪದ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು ಎಂದರು.
19ರಂದು ಬೆಳಗ್ಗೆ ಗದ್ದುಗೆಗೆ ರುದ್ರಾಭಿಷೇಕ ಮತ್ತು ಮಹಾಪೂಜೆ, ಬೆಳಗ್ಗೆ 10.30ಕ್ಕೆ ಸದ್ಗುರು ಸಿದ್ಧೇಶ್ವರಸ್ವಾಮಿ ಕೈಲಾಸ ಮಂಟಪದಲ್ಲಿ ಹುಬ್ಬಳ್ಳಿ ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಉಣಕಲ್ಲ ಗುರುಸಿದ್ಧಯ್ಯ ಹಿರೇಮಠ ಹಾಗೂ ಸವಣೂರು ಮಹಾಂತಯ್ಯ ಹಿರೇಮಠ ಪೌರೋಹಿತ್ಯದಲ್ಲಿ ಸಾಮೂಹಿಕ ವಿವಾಹ ನೆರವೇರಲಿವೆ. ಸಂಜೆ 5.30ಕ್ಕೆ ರಥೋತ್ಸವ ಜರುಗಲಿದೆ ಎಂದರು.
19 ರಿಂದ 23ರವರೆಗೆ ಬಯಲುಗಣ ಕುಸ್ತಿ ನಡೆಯಲಿವೆ. 23ರಂದು ಸಂಜೆ 7 ಗಂಟೆಗೆ ಮಹಾರಥದ ಕಳಸ ಅವರೋಹಣ ಕಾರ್ಯಕ್ರಮ ನಡೆಯಲಿದ್ದು, ಎರಡೆತ್ತಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಅಂದು ಬೆಳಗ್ಗೆ 7 ಗಂಟೆಗೆ ಎತ್ತಿನಖಾಲಿ ಗಾಡಿ ಓಡಿಸುವ ಸ್ಪರ್ಧೆಯನ್ನು ರೈತರಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಟ್ರಸ್ಟ್ ಪದಾಧಿಕಾರಿಗಳಾದ ರಾಮಣ್ಣ ಪದ್ಮಣ್ಣವರ, ಗುರುಸಿದ್ಧಪ್ಪ ಬೆಂಗೇರಿ, ಎಸ್.ಐ. ನೇಕಾರ, ಗುರು ಹಿರೇಮಠ, ಗುರುಸಿದ್ಧಪ್ಪ ಮೆಣಸಿನಕಾಯಿ, ಹನಮಂತಪ್ಪ ವಗ್ಗರ ಸುದ್ದಿಗೊಷ್ಠಿಯಲ್ಲಿ ಹಾಜರಿದ್ದರು.