ಹುಬ್ಬಳ್ಳಿಯ ಭವಾನಿನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಹಿಂದು ಸಮ್ಮೇಳನವು ಉಡುಪಿ (udupisree) ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ಜರುಗಿತು. 
ಧಾರವಾಡ

(udupisree) ನಮ್ಮ ಮಕ್ಕಳ ಹೃದಯದಲ್ಲೂ ರಾಮನಿರಲಿ

ಹುಬ್ಬಳ್ಳಿ: ಶ್ರೀರಾಮ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಯಾದರೆ ಸಾಲು ನಮ್ಮ ಮಕ್ಕಳ ಹೃದಯದಲ್ಲೂ ಇರಬೇಕು. ಶುದ್ಧ ನ್ಯಾಯದ ಹೋರಾಟದ ಮೂಲಕ ನಾವು ಜಯಸಿದ್ದೇವೆ. ನಮ್ಮ ಜವಾಬ್ದಾರಿ ಇಲ್ಲಿಗೆ ಮುಗಿದಿಲ್ಲ. ಪರಕೀಯರ ದಾಳಿಗೆ ತುತ್ತಾಗದಂತೆ ರಕ್ಷಣೆ ಮಾಡುವ ಅಗತ್ಯವಿದೆ ಎಂದು ಉಡುಪಿ (udupisree) ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿವಳಿಕೆ ನೀಡಿದರು.
ಅಶೋಕನಗರದ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಇಲ್ಲಿಯ ಭವಾನಿನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಹಿಂದು ಸಮ್ಮೇಳನವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಹಿಂದುಗಳ ಜಾಗೃತಿ ಏಕೆ ಬೇಕು? ಎಂಬುದಕ್ಕೆ ಅಕ್ಕಪಕ್ಕದ ದೇಶಗಳನ್ನು ನೋಡಿದರೆ ಗೊತ್ತಾಗುತ್ತದೆ. ಅಲ್ಲಿನ ಸನಾತಿನಗಳ ಸ್ಥಿತಿ ಎಲ್ಲರಿಗೂ ಗೊತ್ತಾಗಿದೆ. ಇಷ್ಟಾದರೂ ನಾವು ಜಾಗೃತರಾಗದಿದ್ದರೆ ಇದೇ ಸ್ಥಿತಿ ಮುಂದುವರಿಯಲಿದೆ. ನಮ್ಮ ಸಂತತಿ, ಸನಾತನ ಸಂತತಿ, ಬಹುಸಂತತಿಯಾಗಿ ಉಳಿದರೆ ಮಾತ್ರ ಮಂದಿರ ಮಂದಿರವಾಗಿ ಉಳಿಯುತ್ತದೆ ಎಂದರು.
ನಮ್ಮ ನಾಡು ಶ್ರೀರಾಮನ ಆದರ್ಶವುಳ್ಳದ್ದು. ಮಾತೃಭೂಮಿ ಬಗ್ಗೆ ಪ್ರತಿಯೊಬ್ಬರೂ ಗೌರವ ಭಾವನೆ ಹೊಂದಿರಬೇಕು. ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ನಮ್ಮ ನೆಲ, ಜಲ, ವೇಷಭೂಷಣ, ಸಂಸ್ಕೃತಿ, ನಡೆ-ನುಡಿ, ಆಚಾರ-ವಿಚಾರಗಳನ್ನೇ ಮಾತೆ ಎಂಬಂತೆ ಸಂರಕ್ಷಿಸಬೇಕು. ವಿಶ್ವಕ್ಕೆ ಭಾರತ ದೊಡ್ಡ ಸಂದೇಶಗಳನ್ನು ಸಾರಿದೆ. ಮಕ್ಕಳಿಗೆ ದೇವರ, ಸಾಹಿತ್ಯ, ಪುರಾಣ, ಮಹಾಭಾರತದ ಹೆಸರು ಇಡುವ ಮೂಲಕ ನಮ್ಮ ಸಂಸ್ಕೃತಿ, ಹಿನ್ನೆಲೆ ತಿಳಿಸುವ ಕಾರ್ಯವಾಗಬೇಕು. ಈಗಿನಿಂದಲೇ ಅಭಿಯಾನ ಪ್ರಾರಂಭಿಸಬೇಕು ಎಂದರು.
ದಕ್ಷಿಣ ಮಧ್ಯ ಪ್ರಾಂತದ ಕ್ಷೇತ್ರೀಯ ಬೌದ್ಧಿಕ ಪ್ರಮುಖ ಶ್ರೀಧರ ಸ್ವಾಮೀಜಿ ಮಾತನಾಡಿ, ಎಲ್ಲರ ಒಳಿತು ಬಯಸುವವರೇ ಹಿಂದುಗಳು. ನಮ್ಮ ಮಕ್ಕಳಿಗೆ ಮೌಲ್ಯಗಳನ್ನು ತಿಳಿಸಬೇಕು. ಈ ನಾಡು ನಾಗರಿಕತೆಯ ತೊಟ್ಟಿಲು. ನಾವೆಲ್ಲರೂ ಒಗ್ಗಟ್ಟಾಗಬೇಕು. ಅವಿಭಕ್ತ ಕುಟುಂಬ, ಪರಿಸರ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಆಚರಣೆ, ನಾಗರಿಕ ಕರ್ತವ್ಯ ಅರಿಯಬೇಕು ಎಂದರು.
ಅವಿಭಕ್ತ ಕುಟುಂಬದ ಜೀವನ ನಡೆಸುತ್ತಿರುವ ನೀಲವ್ವ ಸಂಕಪ್ಪ ವಡ್ಡರ ಕುಟುಂಬವನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಅದ್ದೂರಿ ಶೋಭಾಯಾತ್ರೆ ಜರುಗಿತು.
ಅಶೋಕನಗರ ಹಿಂದು ಸಮಿತಿ ಅಧ್ಯಕ್ಷ ಶಿವಾನಂದ ಗುಂಜಾಳ, ವೇ. ವೇಣುಗೋಪಾಲಚಾರ್ಯ, ಭವಾನಿನಗರ ರಾಯರ ಮಠದ ವಿಚಾರಣಕರ್ತ ಎ.ಸಿ. ಗೋಪಾಲ, ವಿವೇಕ ಪವಾರ, ವಿಶ್ವನಾಥ ರಾನಡೆ, ಪರ್ವತ್‌ಸಿಂಗ್ ಕಂಚಿ, ಜಿ.ಐ. ಅಂಗಡಿ, ಸಂಧ್ಯಾ ದೀಕ್ಷಿತ, ವೀಣಾ ಅಠವಲೆ, ಧೀರೇಂದ್ರ ಠಕ್ಕರ, ವಿಜಯೇಂದ್ರ ಭಾಗಲ್, ಚೇತನರಾವ್, ವಂದನಾ ಪುರೋಹಿತ, ರಂಗಾ ಬದ್ದಿ, ದತ್ತಮೂರ್ತಿ ಕುಲಕರ್ಣಿ ಇತರರು ಉಪಸ್ಥಿತರಿದ್ದರು.