development dialog ಹುಬ್ಬಳ್ಳಿಯಲ್ಲಿ ಬುಧವಾರ ಗುರುರಾಜ ದೇಶಪಾಂಡೆ ಹಾಗೂ ಜಯಶ್ರೀ ದೇಶಪಾಂಡೆ ಮಾಹಿತಿ ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಪಥದಲ್ಲಿ ಉದ್ಯಮಿಗಳನ್ನು ಉತ್ತೇಜಿಸುವುದು ಮತ್ತು ನಮೋದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಗರದ ಗೋಕುಲ ರಸ್ತೆಯ ವಿಮಾನ ನಿಲ್ದಾಣ ಬಳಿಯ ದೇಶಪಾಂಡೆ ಫೌಂಡೇಶನ್ ಸ್ಟಾರ್ಟ್ ಅಪ್ ಹಾಗೂ ಸ್ಕಿಲ್ಲಿಂಗ್ ಕ್ಯಾಂಪಸ್ನಲ್ಲಿ ಎರಡು ದಿನ ಕಾರ್ಯಕ್ರಮಗಳು ನಡೆಯಲಿವೆ ಎಂದರು.
16ನೇ ಆವೃತ್ತಿಯ ಡೆವಲಪ್ಮೆಂಟ್ ಡೈಲಾಗ್ ಇದಾಗಿದ್ದು, ಈ ಬಾರಿ "ಕ್ಯಾಟಲೈಸಿಂಗ್ ಕಲೆಕ್ಟಿವ್ ಇಂಪ್ಯಾಕ್ಟ್' ವಿಷಯವಸ್ತುವಿನ ಮೇಲೆ ಸಂವಾದ, ಕಾರ್ಯಾಗಾರಗಳು ನಡೆಯಲಿವೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಸಹಕಾರದೊಂದಿಗೆ ಹೆಚ್ಚಿನ ಪರಿಣಾಮ ಬೀರುವ ಕ್ಷೇತ್ರಗಳಲ್ಲಿ ಯಾವೆಲ್ಲ ಅಭಿವೃದ್ಧಿ ಸಾಧಿಸಬಹುದು ಎಂಬುದರ ಚರ್ಚೆಗಳು ನಡೆಯಲಿವೆ.
ವಿವಿಧ ಉಪಕ್ರಮಗಳಿಂದ ಪ್ರಯೋಜನ ಪಡೆದ 800ಕ್ಕೂ ಹೆಚ್ಚು ಸಾಧಕರು ಸಮ್ಮೇಳನದಲ್ಲಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಪದ್ಮಶ್ರೀ ಬಿ.ವಿ.ಆರ್. ಮೋಹನರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಡಾ. ಇ.ವಿ. ರಮಣ ರೆಡ್ಡಿ, ಶಿಕ್ಷಣ ಇಲಾಖೆ ರಶ್ಮಿ ಮಹೇಶ, ಖುಷ್ಬೂ ಗೋಯಲ್ ಚೌಧರಿ, ಮಂಜುಶ್ರೀ, ದಿವ್ಯ ಪ್ರಭು, ಭುವನೇಶ್ವರ ಪಾಟೀಲ, ಡಾ. ಈಶ್ವರ ಉಳ್ಳಾಗಡ್ಡಿ ಇತರರು ಪಾಲ್ಗೊಳ್ಳುವರು.