ಧಾರವಾಡ ವೃತ್ತದ ಅರಣ್ಯಾಧಿಕಾರಿಗಳು ದಾಳಿ ಮಾಡಿ ಇಬ್ಬರು ಜಿಂಕೆ ಬೇಟೆಗಾರರನ್ನು ಬಂಧಿಸಿ ಜಿಂಕೆ ಮಾಂಸ ಮತ್ತು ಬೇಟೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. 
ಧಾರವಾಡ

ಚುಕ್ಕೆ ಜಿಂಕೆ ಬೇಟೆಯಾಡಿದ್ದ ಇಬ್ಬರ ಬಂಧನ

ಧಾರವಾಡ: ತಾಲೂಕಿನ ಕಲಕೇರಿ ಶಾಖೆಯ ಲಾಳಗಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಜಿಂಕೆ ಬೇಟೆಯಾಡಿದ್ದ ಇಬ್ಬರನ್ನು ಧಾರವಾಡ ವಲಯ ಅಧಿಕಾರಿಗಳ ತಂಡ ಮಂಗಳವಾರ ಬಂಧಿಸಿದೆ. ಲಾಳಗಟ್ಟಿಯ ಕ್ಕೀರಪ್ಪ ಮ್ಯಾಗಡಿ ಹಾಗೂ ಧಾರವಾಡ ಹೊಸಯಲ್ಲಾಪುರದ ವಾಸುದೇವ ನಾಯಕ ಬಂಧಿತರು.
ಇವರಿಬ್ಬರು ಲಾಳಗಟ್ಟಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಚುಕ್ಕೆ ಜಿಂಕೆಯನ್ನು ಬೇಟೆಯಾಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಅಧಿಕಾರಿ- ಸಿಬ್ಬಂದಿ ದಾಳಿ ನಡೆಸಿದ್ದಾರೆ. ಬಂಧಿತರಿಂದ ಜಿಂಕೆ ತಲೆ ಮತ್ತು ಮಾಂಸ, ಕತ್ತರಿಸಲು ಬಳಸಿದ ಆಯುಧಗಳು, ಬಂದೂಕು, ಮದ್ದು& ಗುಂಡು, ಬಲೆ ಹಾಗೂ ಕಾಡು ಹಂದಿಯ ಹಲ್ಲುಗಳು ಮತ್ತು ಕೂದಲನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶೇಖ್​ ಅಬ್ದುಲ್​ ಅಲೀಂ ಸಿದ್ದಿಕಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನಿತಾ ನಿಂಬರಗಿ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಕಿರಣಕುಮಾರ ಕರತಂಗಿ, ಉಪ ವಲಯ ಅರಣ್ಯಾಧಿಕಾರಿಗಳಾದ ಅವಿನಾಶ ರಣಕಾಂಬೆ, ನಕುಲ್​ ಪೂಜೇರಿ, ಇಸು್​ ಪೆಂಡಾರಿ, ಅಜಿತ್​ ದೇವರೆಡ್ಡಿ, ಭಾರತಿ ಸೀತಿಮನಿ, ಗಸ್ತು ಅರಣ್ಯ ಪಾಲಕರಾದ ಸುರೇಶ ಹಾರೋಳಿ, ರಾಮನಗೌಡ ಪಾಟೀಲ, ರಾಜನ್​ ಗುರವ, ಭರಮಪ್ಪ ಸರವಾರಿ, ಯಲಗುರಪ್ಪ ಕಾಶಿನಕುಂಟಿ, ಶಶಿಕುಮಾರ ಕೂಡಗಿ, ಕ್ಕೀರಪ್ಪ ಕಾಶಿ ದಾಳಿಯಲ್ಲಿ ಪಾಲ್ಗೊಂಡಿದ್ದರು.