Trishula ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದುರ್ಗಾ ಸೇನೆ ಪ್ರಮುಖರಾದ ಪೂರ್ಣಿಮಾ ಕಾಡಮ್ಮನವರ.
- ಕಳೆದ ವರ್ಷ 2 ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷಾ ನೀಡಲಾಗಿತ್ತು.
- ಮಹಿಳೆಯರು ತಮ್ಮ ಪರ್ಸ್ಗಳಲ್ಲಿ ಇಟ್ಟುಕೊಳ್ಳಬಹುದಾದ ತ್ರಿಶೂಲ.
- ಪ್ರಮೋದ ಮುತಾಲಿಕ ಮುಖ್ಯ ಭಾಷಣ ಮಾಡುವರು.
ಹುಬ್ಬಳ್ಳಿ :
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದುರ್ಗಾ ಸೇನೆ ಪ್ರಮುಖರಾದ ಪೂರ್ಣಿಮಾ ಕಾಡಮ್ಮನವರ, ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ, ಉದ್ಯೋಗಸ್ಥ ಮಹಿಳೆಯರಿಗೆ, ಮಹಿಳಾ ಮಂಡಳದ ಸದಸ್ಯೆಯರಿಗೆ ತ್ರೀಶೂಲ ದೀಕ್ಷಾ ನೀಡಲಾಗುತ್ತಿದೆ ಎಂದರು.
ಕಳೆದ ವರ್ಷ 2 ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷಾ ನೀಡಲಾಗಿತ್ತು. ಧಾರವಾಡ ಹಾಗೂ ಸುತ್ತಲಿನ ವಿವಿಧ ಜಿಲ್ಲೆಗಳ ಮಹಿಳೆಯರು ಭಾಗವಹಿಸುವರು.
ಮಹಿಳೆಯರು ತಮ್ಮ ಪರ್ಸ್ಗಳಲ್ಲಿ ಇಟ್ಟುಕೊಳ್ಳಬಹುದಾದ 5 ಸಾವಿರ ತ್ರಿಶೂಲಗಳನ್ನು ಮಾಡಿಸಲಾಗಿದ್ದು, ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ಹಿಮಾಚಲ ಪ್ರದೇಶದ ಸನಾತನ ಧರ್ಮದ ಪ್ರಚಾರಕರಾದ ಮೀನಾಕ್ಷಿ ಶೇರಾವತಾ ಹಾಗೂ ಬೆಂಗಳೂರಿನ ಹಿಂದೂ ಜನಜಾಗೃತಿ ಸಮಿತಿಯ ಭವ್ಯಾ ಗೌಡ ಉದ್ಘಾಟಿಸುವರು.
ಹುಬ್ಬಳ್ಳಿಯ ಶ್ರೀಮಾತಾ ಆಶ್ರಮದ ಅಧ್ಯಕ್ಷೆ ಮಾತಾಜಿ ತೇಜೋಮಯಿ, ಗೋಕುಲ ಅಯ್ಯಪ್ಪಸ್ವಾಮಿ ದೇವಸ್ಥಾನದ ಮೋಹನ ಗುರುಸ್ವಾಮಿ ಹಾಗೂ ಶ್ರೀರಾಮ ಸೇನಾ ಉತ್ತರ ಪ್ರಾಂತ ಗೌರವಾಧ್ಯಕ್ಷ ಶ್ರೀ ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಎಸ್ಎಸ್ಕೆ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಾಜಶ್ರೀ ಜಡಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಮುಖ್ಯ ಭಾಷಣ ಮಾಡುವರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಸ್ವರ್ಣ ಗ್ರುಪ್ ಚೇರ್ಮನ್ ಡಾ. ವಿ.ಎಸ್.ವಿ. ಪ್ರಸಾದ, ಸೀಮಾ ಲದ್ವಾ, ಗೀತಾ ಹಿರೇಮಠ, ವೆಂಕಟೇಶ ಕಾಟವೆ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಮಹಿಳೆಯರು ತಮ್ಮನ್ನು ರಕ್ಷಿಸಿಕೊಳ್ಳಲು ಈ ತ್ರಿಶೂಲ ಉಪಯೋಗವಾಗಲಿವೆ. ತ್ರಿಶೂಲ ತೋರಿಸಿದರೆ ಅನೇಕರು ಹೆದರಿ ಹೋಗುತ್ತಾರೆ. ಅಗತ್ಯ ಎನಿಸಿದರೆ ಆತ್ಮರಕ್ಷಣೆಗೂ ಬಳಸಬಹುದಾಗಿದೆ ಎಂದರು.
ತ್ರಿಶೂಲಾ ದೀಕ್ಷಾದೊಂದಿಗೆ ಮಹಿಳೆಯರಿಗೆ ಉಡಿ ತುಂಬುವ ಹಾಗೂ ಹೋಮ, ಹವನಗಳು ಸಹ ನಡೆಯಲಿವೆ ಎಂದು ತಿಳಿಸಿದರು.
ರಾಜಶ್ರೀ ಜಡಿ, ಯಶೋಧಾ ತಾಂಬೆ, ರೋಹಿಣಿ ಬನ್ನೂರ, ನೇತ್ರಾ ಮೇತ್ರಾಣಿ, ಬನಸವರಾಜ ದುರ್ಗದ ಸುದ್ದಿಗೋಷ್ಠಿಯಲ್ಲಿ ಇದ್ದರು.