ಸುದ್ದಿಗೋಷ್ಠಿಯಲ್ಲಿ (Tridasha Sambram) ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ ಮಾತನಾಡಿದರು. ವಿದುಷಿ ಸುಷ್ಮಾ ಕೊಂಗಿ ಇದ್ದರು. 
ಧಾರವಾಡ

ಶಾಸ್ತ್ರೀಯ ನೃತ್ಯ(Tridasha Sambram) ಕಾರ್ಯಕ್ರಮ ತ್ರಿದಶ ಸಂಭ್ರಮ

ಸಂತೋಷ ವೈದ್ಯ
ಹುಬ್ಬಳ್ಳಿ: ನಾಟ್ಯಾಂಜಲಿ (Tridasha Sambram)ನೃತ್ಯ ಕಲಾ ಕೇಂದ್ರದ 30ನೇ ವಾರ್ಷಿಕೋತ್ಸವದ ಅಂಗವಾಗಿ ತ್ರಿದಶ ಸಂಭ್ರಮ-ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಹಾಗೂ ರವಿದಾತಾರ್ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಫೆ. 1 ರಂದು ದೇಶಪಾಂಡೆ ನಗರದ ಸವಾಯಿ ಗಂಧರ್ವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ ತಿಳಿಸಿದರು
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 3 ಗಂಟೆಗೆ ವಿದ್ಯಾರ್ಥಿನಿಯರು ವಿವಿಧ ನೃತ್ಯ ಬಂಧಗಳನ್ನು ಪ್ರಸ್ತುತ ಪಡಿಸುವರು. ಸಂಜೆ 4.30ಕ್ಕೆ ವಿದುಷಿ ವೇದಶ್ರೀ ಸೋಮದೇವ ಮರಾಠೆ ಹಾಗೂ ವಿದುಷಿ ಇಚ್ಚಿತಾ ಮುಡುಕೇರಿ ಇವರಿಗೆ ರವಿದಾತಾರ್ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಕಳೆದ 14 ವರ್ಷದಿಂದ ಈ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ಉದ್ಯಮಿ ಪ್ರಕಾಶ ಹೆಗಡೆ ಅತಿಥಿಗಳಾಗಿ ಪಾಲ್ಗೊಳ್ಳುವರು. ಡಾ. ಸಹನಾ ಭಟ್ಟ ನಿರ್ದೇಶನದಲ್ಲಿ ನೃತ್ಯ ಕಾರ್ಯಕ್ರಮ ಮೂಡಿ ಬರಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿದುಷಿ ಸುಷ್ಮಾ ಕೊಂಗಿ ಇದ್ದರು.