ಭಾರತೀಯ ಸೇನೆಗೆ ಅಗ್ನೀವಿರರಾಗಿ ಆಯ್ಕೆಯಾದ ತಾಲೂಕಿನ ಯುವಕರನ್ನು ಸಮಾಜಸೇವಕ ಮಂಜುನಾಥ ಮಕ್ಕಳಗೇರಿ ಸನ್ಮಾನಿಸಿದರು.
ಧಾರವಾಡ: ಭಾರತೀಯ ಸೇನೆಗೆ ಅಗ್ನೀವಿರರಾಗಿ ಆಯ್ಕೆಯಾದ ತಾಲೂಕಿನ ಯುವಕರನ್ನು ಸಮಾಜಸೇವಕ ಮಂಜುನಾಥ ಮಕ್ಕಳಗೇರಿ ಸನ್ಮಾನಿಸಿದರು.
ಪುಡಕಲಕಟ್ಟಿ ಗ್ರಾಮದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯರಾಗಿ ಜನಿಸಿದ್ದು ನಮ್ಮ ಪುಣ್ಯ. ಭಾರತ ಮಾತೆಯ ಸೇವೆಯ ಅವಕಾಶ ಸಿಕ್ಕಿರುವುದು ನಿಮ್ಮೆಲ್ಲರ ಸೌಭಾಗ್ಯ. ಅಗ್ನೀವಿರರಾಗಿ ದೇಶಸೇವೆ ಮಾಡಿ ನಿಮ್ಮ ಪಾಲಕರು ಮತ್ತು ಗ್ರಾಮಕ್ಕೆ ಕೀರ್ತಿ ತರಬೇಕು ಎಂದರು.
ಸಿದ್ದನಗೌಡ ಪಾಟೀಲ, ರಾಜು ಮಟ್ಟಿ, ರಾಜು ತಳಗೇರಿ, ಮಂಜುನಾಥ ತರ್ಲಟ್ಟಿ, ಮಹಾಂತೇಶ ಸೇತಸನದಿ, ಸಿದ್ದು ತೇಗೂರ, ಹನುಮಂತಗೌಡ ಹಳಕಟ್ಟಿ ಹಾಗೂ ಅಗ್ನೀವಿರರ ಪಾಲಕರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಉಪ್ಪಿನಬೆಟಗೇರಿ, ಕರಡಿಗುಡ್ಡ, ಅಮ್ಮಿನಭಾವಿ, ನರೇಂದ್ರ, ಕಲ್ಲೆ, ಹನುಮನಕೊಪ್ಪ, ಕಲ್ಲೂರ ಹಾಗೂ ಗರಗ ಗ್ರಾಮಗಳ ಸುಮಾರು 50ಕ್ಕೂ ಹೆಚ್ಚು ಯುವಕರನ್ನು ಮಕ್ಕಳಗೇರಿ ಸನ್ಮಾನಿಸಿದರು.