ಆದಿವಾಸಿ ಅಲೆಮಾರಿ (Tribal) ಸಮುದಾಯಗಳ ಕಲಾ ಮೇಳ ಹಾಗೂ ಆದಿವಾಸಿ ಮತ್ತು ಪಾರ್ಧಿ ಹರಿಣಶಿಕಾರಿ ಬುಡಕಟ್ಟು ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘಟಕ ವಾಸುದೇವ ಕಾಳೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂಗವಾಗಿ ಆ. 9ರಂದು ಹುಬ್ಬಳ್ಳಿಯಲ್ಲಿ ಆದಿವಾಸಿ ಅಲೆಮಾರಿ ಸಮುದಾಯಗಳ ಕಲಾ ಮೇಳ ಹಾಗೂ ಆದಿವಾಸಿ ಮತ್ತು ಪಾರ್ಧಿ ಹರಿಣಶಿಕಾರಿ ಬುಡಕಟ್ಟು ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘಟಕ ವಾಸುದೇವ ಕಾಳೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 9 ಗಂಟೆಗೆ ಹುಬ್ಬಳ್ಳಿ ಸ್ಟೇಷನ್ ರಸ್ತೆ ಡಾ. ಅಂಬೇಡ್ಕರ್ ಪ್ರತಿಮೆಯಿಂದ ನೆಹರು ಮೈದಾನದವರೆಗೆ ರಾಜ್ಯದ ಬೇರೆ ಬೇರೆ ಬುಡಕಟ್ಟು ಸಮುದಾಗಳ ಕಲೆ-ಸಂಸ್ಕೃತಿ ಪರಿಚಯಿಸುವ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಲ್ಯಾಮಿಂಗ್ಟನ್ ರಸ್ತೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರ ಚನ್ನಮ್ಮ ವೃತ್ತ, ಮಿನಿ ವಿಧಾನಸೌಧ ಮಾರ್ಗವಾಗಿ ಮೆರವಣಿಗೆ ಸಂಚರಿಸಲಿದೆ ಎಂದರು.
11 ಗಂಟೆಗೆ ನೆಹರು ಮೈದಾನದಲ್ಲಿ ಸಮಾವೇಶವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉಪಸ್ಥಿತಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಅಧ್ಯಕ್ಷ ಎಂ. ಕೃಷ್ಣಯ್ಯ, ಸಚಿವ ಸಂತೋಷ ಲಾಡ್ ಪಾಲ್ಗೊಳ್ಳುವರು. ಶಾಸಕ ಎನ್.ಎಚ್. ಕೋನರಡ್ಡಿ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡುವರು. ಶಾಸಕ ಪ್ರಸಾದ ಅಬ್ಬಯ್ಯ ಆದಿವಾಸಿ ಸೂಲಗಿತ್ತಿಯರಿಗೆ ಆದಿವಾಸಿ ಸಿರಿ ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಸಮಾಜದ ಮುಖಂಡ ಡಾ. ವಿಕಾಶ ಕಾಳೆ ಮಾತನಾಡಿ, ವಿಶ್ವ ಸಂಸ್ಥೆಯು 1994ರಲ್ಲಿ ಆ. 9ರಂದು ವಿಶ್ವ ಆದಿವಾಸಿ ದಿನವೆಂದು ಘೊಷಿಸಿತು. ನಾವು 2011ರಿಂದ ಬೆಂಗಳೂರು, ರಾಮನಗರ, ಮೈಸೂರು, ಚಿತ್ರದುರ್ಗದಲ್ಲಿ ಆದಿವಾಸಿ ದಿನಾಚರಣೆ ಹಾಗೂ ಸಮಾವೇಶ ಆಯೋಜಿಸಿದ್ದೆವು. 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಬುಡಕಟ್ಟು ಸಮುದಾಯಗಳ ಜನಸಂಖ್ಯೆ 42.48 ಲಕ್ಷ ಇದೆ. ಮೂಲ ಬುಡಕಟ್ಟುಗಳ ಕೇಂದ್ರಿತ ಸಮಗ್ರ ಅಧ್ಯಯನಕ್ಕಾಗಿ ಆದಿವಾಸಿ ವಿಶ್ವವಿದ್ಯಾಲಯ ಸ್ಥಾಪಿಸಬೇಕಾಗಿದೆ. ಪ್ರತಿ ಜಿಲ್ಲೆಯಲ್ಲಿ ಆದಿವಾಸಿ ಭವನ ನಿರ್ವಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಆನಂದ ಚವ್ಹಾಣ, ಪ್ರಕಾಶ ಕಟ್ಟಿಮನಿ, ಚಂದ್ರು ಹೆಬಸೂರ, ಭೋವಿರಾಜ, ಇತರರು ಇದ್ದರು.