tree plantation ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 76ನೇ ಜನ್ಮ ದಿನ ನಿಮಿತ್ತ ಶಾಸಕ ಮಹೇಶ ಟೆಂಗಿನಕಾಯಿ ಅವರು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಸಸಿ ನೆಟ್ಟರು.
ಹುಬ್ಬಳ್ಳಿ: ಬಿಲ್ಡ್‌ಮೆಟ್-26 ಮೆಟೇರಿಯಲ್ ಎಕ್ಸ್‌ಪೋ ಕಾರ್ಯಕ್ರಮದಲ್ಲಿ tree plantation ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 76ನೇ ಜನ್ಮ ದಿನ ನಿಮಿತ್ತ ನಗರದ ತೋಳನಕೆರೆ ವೃತ್ತ ಬಳಿಯ ಉದ್ಯಾನದಲ್ಲಿ ಇತ್ತೀಚೆಗೆ ಸಸಿ ನೆಡಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಅವರು ಡಿಪ್ಲೊಮಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಹು-ಧಾ ಜತೆಗೂಡಿ ಸಸಿ ನೆಟ್ಟರು.
ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ ಲೋಕಾಪೂರ, ಕಾರ್ಯದರ್ಶಿ ಎಂ.ಸಿ. ನದಾಫ್, ನಿರ್ದೇಶಕರಾದ ಅಮೃತ ಮೆಹರವಾಡೆ, ರಾಜನ್ ಅಣ್ವೇಕರ, ಚಂದ್ರಕಾಂತ ಸಿಂಗ್ರಿ, ಸಂತೋಷ ಬುಲಬುಲೆ, ಗುರುರಾಜ ಹಾಲಿಗೇರಿ, ಸತೀಶ ಅಣ್ವೇಕರ, ಅಂಬಾಸಾ ಚವ್ಹಾಣ, ಇಸ್ಮಾಯಿಲ್ ಹೊಸಮನಿ, ವಿಜಯ ಶಿರಗುಪ್ಪಿ, ಅಜಿತ ಪಾಟೀಲ, ಇತರರು ಭಾಗವಹಿಸಿದ್ದರು.