transport officer ಹುಬ್ಬಳ್ಳಿಯ ಬಿಆರ್ಟಿಎಸ್ ನಿಲ್ದಾಣದಲ್ಲಿ ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಅಧ್ಯಕ್ಷ ಅತುಲ್ ಕುಮಾರ್ ತಿವಾರಿ ಅವರು ಸ್ಮಾರ್ಟ್ ಕಾರ್ಡ್ ಪರಿಶೀಲಿಸಿದರು. ದ್ವಾರಕಾನಾಥ ಬಾಬು, ವಿವೇಕಾನಂದ ವಿಶ್ವಜ್ಞ, ಎಚ್. ರಾಮನಗೌಡ್ರ, ಇತರರು ಇದ್ದರು.
ಹುಬ್ಬಳ್ಳಿ: transport officer ಇಲ್ಲಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ಅಧ್ಯಕ್ಷ ಅತುಲ್ ಕುಮಾರ್ ತಿವಾರಿ ಅವರು ಸಭೆ ನಡೆಸಿ ವಿವಿಧ ವಿಷಯಗಳ ಚರ್ಚೆ ಮಾಡಿದರು.
ಸಂಸ್ಥೆಯ ಕಾರ್ಯಾಚರಣೆ ಅಂಶಗಳು, ಶಕ್ತಿ ಯೋಜನೆ ಹಾಗೂ ಇತರ ಯೋಜನೆಯ ಅನುಷ್ಠಾನ, ಪಿ.ಎಂ. ಇ -ಸೇವಾ ಯೋಜನೆಯಡಿ ಎಲೆಕ್ಟ್ರಿಕ್ ಬಸ್ ಅನುಷ್ಠಾನದ ಪ್ರಗತಿ, ಸಂಸ್ಥೆಯ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಮಿತಿ ಸದಸ್ಯ ದ್ವಾರಕಾನಾಥ ಬಾಬು ಉಪಸ್ಥಿತಿಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಎಂಡಿ ಪ್ರಿಯಾಂಗಾ ಎಂ., ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡರು.
ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಪ್ರಯಾಣಿಕರೊಂದಿಗೆ ಹಾಗೂ ಸಂಸ್ಥೆಯ ಚಾಲನಾ ಸಿಬ್ಬಂದಿಯೊಂದಿಗೆ ಸಮಾಲೊಚನೆ ನಡೆಸಿದರು.
ಬಿಆರ್ಟಿಎಸ್ ಘಟಕಕ್ಕೆ ಭೇಟಿ ನೀಡಿ, ಚಿಗರಿ ಕಾರ್ಯಾಚರಣೆ ವೀಕ್ಷಿಸಿದರು. ಹೊಸ ಸ್ಮಾರ್ಟ್ ಕಾರ್ಡ್, ಇಟಿಎಂ ಮಷಿನ್ಗಳನ್ನು ಪರಿಶೀಲಿಸಿದರು.
ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ, ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಗಣೇಶ ರಾಠೋಡ, ಮುಖ್ಯ ತಾಂತ್ರಿಕ ಅಭಿಯಂತರ ಸಿದ್ದೇಶ್ವರ ಹೆಬ್ಬಾಳ, ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ ಭಾಗಬಾನ, ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮತ್ತು ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.