ಧಾರವಾಡ ಸಂಚಾರ ಠಾಣೆಯಲ್ಲಿ 42 ಇ- ಚಲನ್ಗಳ ದಂಡ ಪಾವತಿಸಿದ ವಾಹನ ಮಾಲೀಕ.
ಮಂಜುನಾಥ ಎಸ್. ಅಂಗಡಿ ಧಾರವಾಡ
ಸಂಚಾರ ನಿಯಯ ಉಲ್ಲಂಘಿಸಿ ದಂಡಕ್ಕೆ ಗುರಿಯಾಗಿ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. 2026ರ ಮೇ 31ಕ್ಕಿಂತ ಮೊದಲು ಪೊಲೀಸ್ ಇಲಾಖೆಯ ಸಂಚಾರಿ ಇ- ಚಲನ್ ಪ್ರಕರಣಗಳ ದಂಡ ಪಾವತಿಗೆ ಶೇ. 50 ರಿಯಾಯಿತಿ ನೀಡಲಾಗಿದೆ. ಹುಬ್ಬಳ್ಳಿ- ಧಾರವಾಡದ 4 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 6,43,616 ಇ- ಚಲನ್ ಬಾಕಿ ಇದ್ದು, ಇವುಗಳ ದಂಡದ ಮೊತ್ತ ಬರೋಬ್ಬರಿ 30,75,36,800 ರೂಪಾಯಿ!
ಹುಬ್ಬಳ್ಳಿ- ಧಾರವಾಡ ಅವಳಿನಗರ ದಿನೇದಿನೇ ಬೆಳೆಯುತ್ತಲೇ ಇದೆ. ಟ್ರಾಫಿಕ್ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ನಿತ್ಯ ಬಂದೋಬಸ್ತ್ನಲ್ಲಿರುತ್ತಾರೆ. ಸಂಚಾರ ನಿಯಮ ಪಾಲಿಸುವಂತೆ ಸಾರ್ವಜನಿಕರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ವಾಹನ ಸವಾರರಿಂದ ನಿಯಮ ಉಲ್ಲಂಘನೆ ಅವ್ಯಾಹತವಾಗಿ ಮುಂದುವರಿದಿದೆ. ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುವ ಸವಾರರ ಪತ್ತೆಗೆ ಪ್ರಮುಖ ವೃತ್ತಗಳಲ್ಲಿ ಇಲಾಖೆ ಅತ್ಯಾಧುನಿಕ ಕ್ಯಾಮರಾಗಳನ್ನು ಅಳವಡಿಸಿದೆ. ವಾಹನಗಳ ಮೇಲೆ ದಿನವಿಡೀ ನಿಗಾ ಇಟ್ಟು ಸಂಚಾರ ನಿಯಮ ಉಲ್ಲಂನೆ ಕಂಡುಬಂದರೆ ಇ- ಚಲನ್ ಸೃಷ್ಟಿಸಿ ಮಾಲೀಕರ ಮನೆಗೆ ದಂಡದ ನೋಟಿಸ್ ಕಳುಹಿಸಲಾಗುತ್ತಿದೆ.
ಹು-ಧಾ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಹುಬ್ಬಳ್ಳಿಯ ಉತ್ತರ ಸಂಚಾರ ಠಾಣೆ, ದಣ ಸಂಚಾರ ಠಾಣೆ, ಪೂರ್ವ ಸಂಚಾರ ಠಾಣೆ ಹಾಗೂ ಧಾರವಾಡ ಸಂಚಾರ ಠಾಣೆಗಳಿವೆ. ಕಮೀಷನರೇಟ್ ವ್ಯಾಪ್ತಿಯಲ್ಲಿ ಇ& ಚಲನ್ ವ್ಯವಸ್ಥೆ ಜಾರಿಗೊಂಡ 2019ರಿಂದ 2026ರ ಮೇ 31ರವರೆಗೆ 12,09,884 ಇ- ಚಲನ್ ಸೃಷ್ಟಿಸಿ 54.07 ಕೋಟಿ ರೂ. ದಂಡ ವಿಧಿಸಲಾಗಿತ್ತು. ಈ ಪೈಕಿ 2026ರ ಮೇ 31ರವರೆಗೆ ವಾಹನ ಸವಾರರು 5,66,268 ಇ- ಚಲನ್ಗಳ 23.31 ಕೋಟಿ ರೂ. ದಂಡ ಪಾವತಿಸಿದ್ದಾರೆ. ಇನ್ನೂ 6,43,616 ಇ- ಚಲನ್ಗಳ 30.75 ಕೋಟಿ ರೂ. ದಂಡ ಪಾವತಿ ಬಾಕಿ ಇದೆ. ದಂಡದ ಶೇ. 50ರಷ್ಟು ಮೊತ್ತ ಪಾವತಿಗೆ ಸರ್ಕಾರ ಜೂ. 21ರಿಂದ ಜು. 10ರವರೆಗೆ ಅವಕಾಶ ನೀಡಿದೆ. ವಾಹನ ಸವಾರರು ಇದರ ಲಾಭ ಪಡೆಯಬೇಕು ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಚಾಲನೆ, ಬೈಕ್ನಲ್ಲಿ ಮೂವರ ಸಂಚಾರ, ಸಿಗ್ನಲ್ ಜಂಪ್, ಕಾರ್ ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸದಿರುವುದು, ನೋ ಪಾಕಿರ್ಂಗ್ನಲ್ಲಿ ವಾಹನ ನಿಲುಗಡೆ ಸೇರಿ ವಿವಿಧ ನಿಯಮ ಉಲ್ಲಂನೆಗೆ ಇ& ಚಲನ್ ಸೃಷ್ಟಿಯಾಗಿವೆ. ಇವುಗಳ ದಂಡದ ಮೊತ್ತ ಬೇರೆಯಾಗಿದ್ದು, ವಾಹನ ನೋಂದಣಿ ಸಂಖ್ಯೆಗೆ ದಂಡದ ವಿವರ ದಾಖಲಾಗಿರುತ್ತದೆ.
"
ಇ- ಚಲನ್ಗಳ ಅರ್ಧ ದಂಡ ಪಾವತಿಸುವಂತೆ ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಠಾಣೆಗೆ ಭೇಟಿ ಅಥವಾ ಟ್ರಾಫಿಕ್ ಪೊಲೀಸರನ್ನು ಸಂಪಕಿರ್ಸಿ ವಾಹನಗಳ ಮೇಲಿನ ದಂಡ ಪರಿಶೀಲಿಸಿಕೊಳ್ಳಬೇಕು. ಜು. 10ರವರೆಗೆ ಅರ್ಧ ದಂಡ ಪಾವತಿಗೆ ಅವಕಾಶವಿದ್ದು, ವಾಹನ ಸವಾರರು ಇದರ ಪ್ರಯೋಜನ ಪಡೆಯಬೇಕು.
— ರವೀಶ ಸಿ.ಆರ್., ಡಿಸಿಪಿ ಕೆಂ ಆ್ಯಂಡ್ ಟ್ರಾಫಿಕ್