ಧಾರವಾಡ ರಾಯಾಪುರ (Tool Design) ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಟೂಲ್ ಡಿಸೈನ್ ಮತ್ತು ಉತ್ಪಾದನೆ ಕುರಿತ ಕಾರ್ಯಾಗಾರವನ್ನು ನರೇಂದ್ರ ಕುಲಕರ್ಣಿ ಉದ್ಘಾಟಿಸಿದರು. ಸುಭಾಷ ಅರ್ಕಸಾಲಿ, ಶಿವಾನಂದ ಕುಂಬಾರ, ಬಸವರಾಜ ಬಿ. ಇತರರು ಇದ್ದರು.
ಹುಬ್ಬಳ್ಳಿ: ಯುವಕರು (Tool Design) ಉದ್ಯೋಗ ಹುಡುಕುವವರಾಗದೇ, ಉದ್ಯೋಗ ಸೃಷ್ಟಿಸುವವರಾಗಬೇಕು ಎಂದು ಕರ್ನಾಟಕ ಮಟೀರಿಯಲ್ ಟೆಸ್ಟಿಂಗ್ ಕೇಂದ್ರದ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಲಕರ್ಣಿ ಹೇಳಿದರು.
ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ರಾಯಾಪುರ) ಮಂಗಳವಾರ ಆಯೋಜಿಸಿದ್ದ ಟೂಲ್ ಡಿಸೈನ್ ಮತ್ತು ಉತ್ಪಾದನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ಉದ್ಯೋಗ ಸೃಷ್ಟಿಗೆ ಮತ್ತು ಆರ್ಥಿಕ ಅಭಿವೃದ್ಧಿಗೆ, ಸ್ಟಾರ್ಟಪ್ಗಳಿಗೆ ಎಂಎಸ್ಎಂಇ ಕ್ಷೇತ್ರಗಳಲ್ಲಿ ಹಲವಾರು ಯೋಜನೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.
ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಇನ್ನೊಬ್ಬರಿಗೆ ಉದ್ಯೋಗ ಕೊಡುವಂತರಾಗಬೇಕು. ಎಂಎಸ್ಎಂಇ ಕ್ಷೇತ್ರದಲ್ಲಿ ಉದ್ಯಮ ಪ್ರಾರಂಭಿಸುವುದಕ್ಕೆ ಅಗತ್ಯವಾದ ವ್ಯವಹಾರ ನಿರ್ವಹಣೆ, ಮಾರ್ಕೆಟಿಂಗ್ ತಂತ್ರಜ್ಞಾನ, ಉದ್ಯಮ ಮತ್ತು ಕೌಶಲ ತರಬೇತಿ ಪಡೆದುಕೊಂಡು ಕೈಗಾರಿಕೆ ಸ್ಥಾಪಿಸಬೇಕೆಂದು ಸಲಹೆ ನೀಡಿದರು.
ಹಿರಿಯ ತಾಂತ್ರಿಕ ಸಲಹೆಗಾರ ಮತ್ತು ಮಾರ್ಗದರ್ಶಕ ಸುಭಾಷ ಅರ್ಕಸಾಲಿ, ಪ್ರಾಂಶುಪಾಲ ಶಿವಾನಂದ ಕುಂಬಾರ, ಜಿಟಿಟಿಸಿ ಕೌಶಲ ಅಭಿವೃದ್ಧಿ ಘಟಕದ ಮುಖ್ಯಸ್ಥ ಬಸವರಾಜ ಬಿ. ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜಿಟಿಟಿಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.