tiranga rally ಹುಬ್ಬಳ್ಳಿಯಲ್ಲಿ ಬುಧವಾರ 150 ಅಡಿ ಉದ್ದದ ತ್ರಿವರ್ಣ ಧ್ವಜದೊಂದಿಗೆ ಅದ್ದೂರಿ ಪಥ ಸಂಚಲನ ಜರುಗಿತು.
ಹುಬ್ಬಳ್ಳಿ: ಸ್ವಾತಂತ್ರೊೃೀತ್ಸವ ನಿಮಿತ್ತ ಚಿನ್ಮಯ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯ, ಎನ್‌ಎಸ್‌ಎಸ್ ಘಟಕ, ನಕ್ಷತ್ರ ಟೆಕ್ನಾಲಜಿ, ಮತ್ತು ಹಮ್‌ಭಾರತಿ ಫೌಂಡೇಷನ್ ವತಿಯಿಂದ ನಗರದಲ್ಲಿ 150 ಅಡಿ ಉದ್ದದ ತ್ರಿವರ್ಣ ಧ್ವಜದೊಂದಿಗೆ tiranga rally ಅದ್ದೂರಿ ಪಥ ಸಂಚಲನ ಜರುಗಿತು.
ಹುಬ್ಬಳ್ಳಿ ಚಿನ್ಮಯ ಮಿಶನ್ ಮುಖ್ಯಸ್ಥ ಶ್ರೀ ಸ್ವಾಮಿ ಕೃತಾತ್ಮಾನಂದಜಿ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರೊೃೀತ್ಸವ ಮುನ್ನಾದಿನ ಹುಬ್ಬಳ್ಳಿಯಲ್ಲಿ ಇಂಥ ಕಾರ್ಯಕ್ರಮ ಆಯೋಜಿಸುತ್ತಿರುವುದು ಸಂತೋಷ ತಂದಿದೆ. ಮನೆ ಮನೆಗಳಲ್ಲಿ ಸ್ವಾತಂತ್ರೃದಿನ ಆಚರಿಸುವ ಮೂಲಕ ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೂಡಿಸಬೇಕು. ಹಾಗಾಗಿ ಕಳೆದ 16 ವರ್ಷದಿಂದ ಇಂಥ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಹಮ್ ಭಾರತಿ ಫೌಂಡೇಷನ್ ಅಧ್ಯಕ್ಷ ಅನ್ವರ್ ಮುಲ್ಲಾ, ಪ್ರಾಚಾರ್ಯೆ ಪಿ. ಶರ್ಮಿಲಿ ನಾಯ್ಡು ಮಾತನಾಡಿದರು.
ಚಿನ್ಮಯ ಕಾಲೇಜ್ ಆವರಣದಿಂದ ಆರಂಭವಾದ ಪಥಸಂಚಲನವು ರಮೇಶ ಭವನ, ಸರ್ವೋದಯ ಸರ್ಕಲ್ ಮೂಲಕ ರೈಲ್ವೆ ನಿಲ್ದಾಣದ ಮುಖ್ಯದ್ವಾರದ ವರೆಗೆ ತೆರಳಿತು. ಜಾಂಜ್ ಮೇಳ ವಿದ್ಯಾರ್ಥಿಗಳ ಹೆಜ್ಜೆ ಪಥ ಸಂಚಲನಕ್ಕೆ ಆಕರ್ಷಣೆ ತಂದಿತು.
ಚಿನ್ಮಯ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಿರೀಶ ಉಪಾಧ್ಯಾಯ, ಧರ್ಮದರ್ಶಿಗಳಾದ ಪಾಂಡುರಂಗ ನಾಯ್ಡು, ಆರ್.ಎನ್. ಮೂರ್ತಿ, ಆಡಳಿತಾಧಿಕಾರಿ ವಿಶ್ವನಾಥ ರಾನಡೆ, ಸದಸ್ಯರಾದ ಅಶೋಕ ತೆಲಗಾರ, ಸಿಮ್ರಾನ್ ಮುಲ್ಲಾ, ಇತರರರಿದ್ದರು.