tippu sultan ಧಾರವಾಡ ಜಿಲ್ಲಾ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಅಲ್ಪಸಂಖ್ಯಾತರ ಸಂಘಟನೆ ಪದಾಧಿಕಾರಿಗಳು ಹುಬ್ಬಳ್ಳಿಯಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ರವಾನಿಸಿದರು.
ಹುಬ್ಬಳ್ಳಿ: ಬರದಿಂದ ತತ್ತರಿಸಿರುವ ಧಾರವಾಡ ಜಿಲ್ಲಾ ರೈತರ ಸಾಲ ಮನ್ನಾ ಹಾಗೂ ಬರ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ tippu sultan ಅಲ್ಪಸಂಖ್ಯಾತರ ಸಂಘಟನೆ ನೇತೃತ್ವದಲ್ಲಿ ನಗರದ ಮಿನಿವಿಧಾನಸೌಧದ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು.
ಜಿಲ್ಲೆಯ ಬಹುತೇಕ ರೈತರು ಬೆಳೆ ಬೆಳೆದರೂ ಹುಳುಗಳ ಕಾಟದಿಂದ ಎಲ್ಲ ಬೆಳೆ ಕಳೆದುಕೊಂಡಿದ್ದಾರೆ. ಹೆಸರು ಬೆಳೆ ಬಂದರೂ ಬಾರದಂತಾಗಿದ್ದು, ಮಳೆ ಇಲ್ಲದೇ ಫಸಲು ಕಮರಿ ಹೋಗಿದೆ. ಹೊಲಗಳು ಹಸಿರಿನಿಂದ ಕೂಡಿದರೂ ಫಸಲು ಮಾತ್ರ ಶೂನ್ಯ. ತಕ್ಷಣ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಬರ ಪರಿಹಾರ ಘೋಷಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ರವಾನಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮೌಲಾಲಿ ಮುಲ್ಲಾ, ಪ್ರಮುಖರಾದ ಗಂಗಾಧರ ಪೆರೂರ, ರಮೇಶ ವೇಡಪಲ್ಲಿ, ಅಖಿಲಾ ತಿವಾರಿ, ಓಂ ಸಂಗಮೇಶ್ವರ, ವಿಜಯ ಕರಾ, ಮಾರುತಿ ಕಾಲವೆ, ಗೌಸ್ ಕಲಾದಗಿ, ಹಜರೇಸಾಬ್, ಫಾರುಕ್ ಸವಣೂರ, ಎಸ್.ಎ. ಮುಲ್ಲಾ, ಆಸೀಫ್ ಮುಲ್ಲಾ, ಮಂಜುನಾಥ ನೂಲ್ವಿ ಇತರರು ಪ್ರತಿಭಟನೆಯಲ್ಲಿದ್ದರು.