tibetan request ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಟಿಬೇಟಿಯನ್​ ವುಮೆನ್​ ಅಸೋಸಿಯೇಶನ್​ ಸದಸ್ಯರು ಪಂಚೇನ್​ ಲಾಮಾ ವಿಮೋಚನೆಗೆ ಆಗ್ರಹಿಸಿ ಅಭಿಯಾನ ನಡೆಸಿದರು. 
ಧಾರವಾಡ

tibetan request ನಮ್ಮ ಪಂಚೇನ್ ಲಾಮಾ ಸ್ವತಂತ್ರಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಟಿಬೇಟಿಯನ್​ ವುಮೆನ್​ ಅಸೋಸಿಯೇಶನ್​ ಮನವಿ
  • ಸಾಂಪ್ರದಾಯಿಕವಾಗಿ ಘೋಷಣೆಯಾದ ಗೆಧುನ್ ಚೋಕಿ
  • ಹುಬ್ಬಳ್ಳಿಯಲ್ಲಿ ಮಹಿಳೆಯರಿಂದ ವಿಮೋಚನೆ ಅಭಿಯಾನ
ಹುಬ್ಬಳ್ಳಿ: tibetan request ಘೋಷಣೆಯಾದ ಕೆಲವೇ ದಿನಗಳಲ್ಲಿ ಕಣ್ಮರೆಯಾಗಿರುವ 11ನೇ ಪಂಚೇನ್​ ಲಾಮಾ ಅವರನ್ನು ಸ್ವತಂತ್ರಗೊಳಿಸಲು ವಿಶ್ವ ಸಮುದಾಯ ಸಹಕರಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಮುಂಡಗೋಡದ ಪ್ರಾದೇಶಿಕ ಟಿಬೇಟಿಯನ್​ ವುಮೆನ್​ ಅಸೋಸಿಯೇಶನ್​ ಅಭಿಯಾನ ನಡೆಸಿತು.
14ನೇ ದಲಾಯಿ ಲಾಮಾ ಅವರು 1995ರ ಮೇ 14ರಂದು ಸಾಂಪ್ರದಾಯಿಕವಾಗಿ ಗೆಧುನ್​ ಚೋಕಿ ನ್ಯಾಮಾ ಅವರನ್ನು 11ನೇ ಪಂಚೇನ್​ ಲಾಮಾ ಎಂದು ಘೋಷಣೆ ಮಾಡಿದ್ದರು. ಅದಾದ ಮೂರು ದಿನಗಳ ನಂತರ ಅವರು ಕಣ್ಮರೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಿ, ಇದಕ್ಕಾಗಿ ವಿಶ್ವದ ರಾಷ್ಟ್ರಗಳು ತಮಗೆ ಸಹಕಾರ ನೀಡಬೇಕು ಎಂಬುದು ಟಿಬೇಟಿಯನ್​ ವುಮೆನ್ಸ್​ ಅಸೋಸಿಯೇಶನ್​ ಮನವಿ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿರುವ ಪ್ರಾದೇಶಿಕ ಟಿಬೇಟಿಯನ್​ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಈ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ. ಅಭಿಯಾನ ಅಂಗವಾಗಿ ಹುಬ್ಬಳ್ಳಿಯಲ್ಲಿಯೂ ಪಂಚೇನ್​ ಲಾಮಾ ಅವರ ಸಂಪೂರ್ಣ ವಿವರ ಇರುವ ಕರಪತ್ರಗಳನ್ನು ಹಂಚುತ್ತ ವಿಶ್ವ ಸಮುದಾಯಕ್ಕೆ ಅವರು ಮನವಿ ಮಾಡುತ್ತಿದ್ದಾರೆ.
ಕಣ್ಮರೆಯಾಗಿರುವ ಪಂಚೇನ್​ ಲಾಮಾ ಅವರು ಜಗತ್ತಿನ ಎಲ್ಲಿಯೇ ಇದ್ದರೂ ಸುರಕ್ಷಿತವಾಗಿರಬೇಕು. ಅವರನ್ನು ವಾಪಸ್​ ಕಳಿಸಿ ಧರ್ಮಾಚರಣೆಗೆ ಅನುಕೂಲ ಮಾಡಿ ಕೊಡಬೇಕು. ಲಾಮಾ ಎಂದು ಘೋಷಿಸುವುದು ಟಿಬೇಟಿಯನ್​ರು ಶತಮಾನದಿಂದ ನಡೆಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ ಎಂದು ಹೇಳಿದರು.
ಪಂಚೇನ್​ ಲಾಮಾ ಹಾಗೂ ಜತೆಗಿದ್ದವರನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಲಾಯಿತು. ಆ ನಂತರ ಅವರು ಎಲ್ಲಿ ಇದ್ದಾರೆ ಎಂಬುದು ತಿಳಿಯದಾಗಿದೆ. ಆಗ ಲಾಮಾ ಅವರಿಗೆ ಕೇವಲ 6 ವರ್ಷವಾಗಿತ್ತು. ಇವರನ್ನು ಸೆರೆಯಲ್ಲಿರುವ ಜಗತ್ತಿನ ಕಿರಿಯ ರಾಜಕೀಯ ವ್ಯಕ್ತಿ ಎಂದು ಹೇಳಲಾಗುತ್ತದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕು ಹಾಗೂ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ಮಹಿಳಾ ಸಂಘಟನೆಯ ಸದಸ್ಯರು ದೂರಿದ್ದಾರೆ.