ಕುಖ್ಯಾತ ಅಂತರಜಿಲ್ಲಾ ದ್ವಿಚಕ್ರ ವಾಹನ ಕಳ್ಳ (thief) ಸೈಯದ್ ಅಲಿ ಅಲಿಯಾಸ್ ಹರ್ಷಾನನ್ನು ಹುಬ್ಬಳ್ಳಿಯ ಕೇಶ್ವಾಪೂರ ಠಾಣೆ ಪೊಲೀಸರು ಬಂಧಿಸಿ, ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. 
ಧಾರವಾಡ

(thief) ಅಂತರಜಿಲ್ಲಾ ದ್ವಿಚಕ್ರ ವಾಹನ ಕಳ್ಳನ ಬಂಧನ

ಮರಿದೇವ ಹೂಗಾರ
ಹುಬ್ಬಳ್ಳಿ: ಕುಖ್ಯಾತ ಅಂತರಜಿಲ್ಲಾ ದ್ವಿಚಕ್ರ ವಾಹನ ಕಳ್ಳನನ್ನು (thief) ಇಲ್ಲಿಯ ಕೇಶ್ವಾಪೂರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ಸೈಯದ್ ಅಲಿ ಅಲಿಯಾಸ್ ಹರ್ಷಾ ಅಲಿಯಾಸ್ ಹರ್ಷವರ್ಧನ ನದಾಫ್ (27) ಬಂಧಿತ.
ಬಂಧಿತನಿಂದ 7 ರಾಯಲ್ ಎನ್‌ಫೀಲ್ಡ್, 2 ಎನ್‌ಟಾರ್ಕ್, 1 ಹೋಂಡಾ ಡಿಯೋ, ಯಮಹಾ, ಬಜಾಜ್ ಪಲ್ಸರ್ ಹೀಗೆ 20 ಲಕ್ಷ ರೂ. ಮೌಲ್ಯದ ಒಟ್ಟು 12 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಸೈಯದ್ ಅಲಿಯು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ನಗರಗಳಲ್ಲಿ ಕಳವು ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.