ಧಾರವಾಡ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಕರ್ನಾಟಕಕ್ಕೆ ಸೀಮಿತವಾದ ಸಂಘಟನೆ ಅಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ವಯಂ ಸೇವಕ ಸಂಘಟನೆಯಾಗಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಆರ್‌ಎಸ್‌ಎಸ್ ಕಾರ್ಯ ನಿರ್ವಹಿಸುತ್ತಿದೆ. ಸಂಘದ ನೋಂದಣಿ ಬಗ್ಗೆ ಕೇಳುತ್ತಿರುವ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಿಂದೆ ಹಿಂದೂ ವಿರೋಧಿ ಶಕ್ತಿ ಇದೆ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ ಖರ್ಗೆ, ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಖರ್ಗೆ ಈ ರಾಜ್ಯದ 7 ಕೋಟಿ ಜನರಿಗೆ ಗೃಹ ಮಂತ್ರಿ. ಆದರೆ, ಆರ್‌ಎಸ್‌ಎಸ್ 140 ಕೋಟಿ ಜನರಿಗಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಆರ್‌ಎಸ್‌ಎಸ್ ಸೇರಬೇಕೆಂಬ ವಾತಾವರಣವಿದೆಯೇ ಹೊರತು, ಕಾಂಗ್ರೆಸ್ ಸೇರಲು ಬಯಸುತ್ತಿಲ್ಲ ಎಂದರು.
ಖರ್ಗೆ ಅವರು ಸರ್ಕಾರಕ್ಕೆ ಪತ್ರ ಕಳುಹಿಸಿದ್ದೇನೆ, ವೈಯಕ್ತಿಕ ಪತ್ರವಲ್ಲ ಎಂದಿದ್ದಾರೆ. ಹಾಗಿದ್ದರೆ ನೀವು ಕಳುಸಿದ ಪತ್ರ ಸರ್ಕಾರದ್ದೇ ಆದರೆ ಮುಖ್ಯಮಂತ್ರಿ ಏಕೆ ಮಾತನಾಡುತ್ತಿಲ್ಲ? ವಿಧಾನಸೌಧದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ. ಅವರೇ ಆ ಬಗ್ಗೆ ಮಾಯನಾಡುತ್ತಿಲ್ಲ. ಗೃಹ ಮಂತ್ರಿ ಆದ ನಿಮಗೆ ಈ ಬಗ್ಗೆ ಮಾತನಾಡಲು ಯಾವುದೇ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖರ್ಗೆ ಅವರು ಗೃಹ ಮಂತ್ರಿ ಸ್ಥಾನಕ್ಕೆ ಅಗೌರವ ತರುತ್ತಿದ್ದಾರೆ. ರಾಜ್ಯದಲ್ಲಿ ಹಲವು ಅಕ್ರಮ ಚಟುವಟಿಕೆ ನಡೆಯುತ್ತಿವೆ. ಗೃಹ ಇಲಾಖೆ ಭ್ರಷ್ಟಾಚಾರದ ಕೂಪವಾಗಿದೆ. ಇದ್ಯಾವುದೂ ಅವರಿಗೆ ಕಾಣುತ್ತಿಲ್ಲ. ಕೇವಲ ಆರ್‌ಎಸ್‌ಎಸ್ ಮಂತ್ರ ಕಾಣುತ್ತಿದೆ. ಆರ್‌ಎಸ್‌ಎಸ್ ಯಾವುದರೂ ತಪ್ಪು ಮಾಡಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು. ನೋಂದಣಿಯಾಗದ ಸಾವಿರಾರು ಮಸೀದಿ, ಚರ್ಚ್ಗಳಿವೆ. ಅಂತಹ ಯಾವ ಮದರಸಾ, ಮಸೀದಿ, ಚರ್ಚ್ಗಳ ಆಡಿಟ್ ಆಗಿದೆಯಾ? ನಿಮಗೆ ಗೃಹ ಇಲಾಖೆಯ ಮದ ಏರಿದೆ ಎಂದು ವಾಗ್ದಾಳಿ ನಡೆಸಿದರು.
ನಟ ಪ್ರಕಾಶ್‌ರಾಜ್ ಬಂಧಿಸಲು ಒತ್ತಾಯ:
ಧರ್ಮಸ್ಥಳ ಪ್ರಕರಣದಲ್ಲಿ ನಟ ಪ್ರಕಾಶ್‌ರಾಜ್ ಹೆಸರು ಕೇಳಿ ಬಂದಿದ್ದು, ಕೂಡಲೇ ಅವರನ್ನು ಎಸ್‌ಐಟಿ ಅಽಕಾರಿಗಳು ಬಂಧಿಸಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ಪ್ರಕಾಶ್‌ರಾಜ್ ಅವರ ಭಾವಚಿತ್ರ ಹರಿದು ಆಕ್ರೋಶ ವ್ಯಕ್ತಪಡಿಸಿದ ಅವರು, ಬುರುಡೆ ಚಿನ್ನಯ್ಯ ಹೈಕೋರ್ಟ್ಗೆ ಅರ್ಜಿ ಹಾಕಿದ್ದ. ಅದರಲ್ಲಿ ಪ್ರಕಾಶ್‌ರಾಜ್ ಹೆಸರು ಉಲ್ಲೇಖವಾಗಿದೆ. ಇದಕ್ಕೆ ಸ್ಪಷ್ಟನೆ ಕೊಡುವಾಗ ಸ್ವತಃ ಪ್ರಕಾಶ್‌ರಾಜ್ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಎಸ್‌ಐಟಿ ಅಽಕಾರಿಗಳು ಪ್ರಕಾಶ್ ರಾಜ್‌ನನ್ನು ಬಂಽಸಿ ವಿಚಾರಣೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಪ್ರಕಾಶ್‌ರಾಜ್ ಧರ್ಮಸ್ಥಳದ ಹೆಸರನ್ನು ಕುಲಗೆಡಿಸಿದ್ದಾರೆ. ಇಂದು ಅವರ ಷಡ್ಯಂತ್ರ ಹೊರಬಿದ್ದಿದೆ. ಪ್ರಕಾಶ್‌ರಾಜ್ ಬಹುಭಾಷಾ ಖಳನಟ ಇದ್ದಾರೆ. ಖಳನಟನಾದ ಅವರು ವಾಸ್ತವಿಕ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬಾರದು ಎಂದರು.